ಮಲ್ಲಿಕಾರ್ಜುನ ಹೂವಪ್ಪ ಬೆಹರೆ ನಾಪತ್ತೆ
ಸವದತ್ತಿ 16: ತಾಲ್ಲೂಕು ಗೊಂದಿ-ಕಾತ್ರಾಳ ಗ್ರಾಮದ ಮಲ್ಲಿಕಾರ್ಜುನ ಹೂವಪ್ಪ ಬೆಹರೆ(ಬೈರನ್ನವರ) ವಯಸ್ಸು 35 ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ನಾಪತ್ತೆಯಾಗಿರುವ ಮಲ್ಲಿಕಾರ್ಜುನ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ 08330-22233, 0831-2474365 ಸಂಪರ್ಕಿಸಿ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಲಾಗಿದೆ.