ಮನರಂಜನೆ

ಮಲಯಾಳಂ ನಟಿ ಶಾರದಾ ವಿಧಿವಶ

ಮಲಯಾಳಂ ನಟಿ ಶಾರದಾ ವಿಧಿವಶ

ಕೋಯಿಕ್ಕೋಡ್, ನ. 09: ಮಲಯಾಳಂನ ಜನಪ್ರಿಯ ನಟಿ ಕೋಯಿಕ್ಕೋಡ್ ಶಾರದಾ ಅವರು ಮಂಗಳವಾರ ನಿಧನರಾಗಿದ್ದಾರೆ.   ಅವರಿಗೆ 84 ವರ್ಷ ವಯಸ್ಸಾಗಿತ್ತು.

ಹಿರಿಯ ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಕಳೆದ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  

ಕೋಯಿಕ್ಕೋಡ್ ಮೂಲದ ಶಾರದ ಅವರು ಪ್ರಮುಖ ರಂಗಭೂಮಿ ಕಲಾವಿದರಾಗಿ ಕೋಝಿಕ್ಕೋಡ್ ಶಾರದಾ ಎಂದೇ ಜನಪ್ರಿಯರಾಗಿದ್ದರು. ಅವರು 1979 ರಲ್ಲಿ ಮಲಯಾಳಂ ಚಲನಚಿತ್ರ "ಅಂಗಕುರ್" ನಲ್ಲಿ ಚಿತ್ರರಂಗ ಪ್ರವೇಶಿಸಿ ಪ್ರಖ್ಯಾತರಾದರು. 

ಅನುಬಂಧಂ, ನಾಲ್ಕಾವಳ ಮತ್ತು ಅನ್ಯರುದೇ ಭೂಮಿ, ಉತ್ಸವಪಿಟ್ಟೆನ್ನು, ಸದಯಂ, ಸಲ್ಲಾಪಂ, ಕಿಲಿಚುಂಡನ್ ಮಾಂಬಳಂ, ಅಮ್ಮಕಿಳಿಕೂಡು, ನಂದನಮ್ಮ, ಯುಗಪುರುಷ, ಕುಟ್ಟಿಸ್ರಾಂಕ್ ಸೇರಿದಂತೆ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದರು.  ಅಲ್ಲದೆ ಕಿರುತೆರೆ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. 

ಸುದ್ದಿ ಓದಿ