ಮಕ್ತುಂಹುಸೇನ ನದಾಫಗೆ ಪಿಎಚ್ಡಿ ಪದವಿ
ಬೈಲಹೊಂಗಲ 02: ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮಕ್ತುಂಹುಸೇನ ಇಮಾಮಸಾಬ ನದಾಫ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ರ್ತೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಿಂದ ಪಿಎಚ್ಡಿ ಪದವಿ ಪ್ರದಾನ ಮಾಡಲಾಗಿದೆ. ಅವರು “ಮುಂಬಯಿ ಕರ್ನಾಟಕದ ತತ್ವಪದಗಳು” ಎಂಬ ಕನ್ನಡ ವಿಷಯದ ಮೇಲೆ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿದ್ದರು. ಇವರಿಗೆ ಬೆಳಗಾವಿಯ ಅಂಜುಮನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪುರ ಅವರು ಮಾರ್ಗದರ್ಶನ ನೀಡಿದ್ದರು.
ಅವರನ್ನು ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳು, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಚೇರಮನ್, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಚಾರ್ಯರು ಉಪನ್ಯಾಸಕ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.