ಶಿಗ್ಗಾವ್

ಒಂದೇ ಕಡೆ ರಸ್ತೆ ಸಂಚಾರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಒತ್ತಾಯ

ಒಂದೇ ಕಡೆ ರಸ್ತೆ ಸಂಚಾರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಒತ್ತಾಯ

ಲೋಕದರ್ಶನ ವರದಿ

ಶಿಗ್ಗಾವಿ 08:  ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಜಯಲಕ್ಷ್ಮೀ ಹೋಟೇಲ್ನ ಪಕ್ಕದ ರಸ್ತೆಯಿಂದ ಹಳೇ ಬಸ್ಟ್ಯಾಂಡ ಮಾರ್ಗದ ತ್ರೀವೇಣಿ ಹೋಟೇಲ್ವರೆಗೂ ಒಂದೇ ಕಡೆ ರಸ್ತೆ ಸಂಚಾರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಶಂಕರನಾಗ್ ಆಟೋ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ತಹಶೀಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಮಾಡಿ ಒತ್ತಾಯಿಸಲಾಯಿತು.

ಶಿಗ್ಗಾವಿ ಪಟ್ಟಣವು ವೇಗವಾಗಿ ಬೆಳೆಯುತ್ತಿದ್ದು, ಸಾರ್ವಜನಿಕ ದಟ್ಟಣೆ ಹಾಗೂ ವಾಹನದ ದಟ್ಟಣೆಯು ಸಹ ಹೆಚ್ಚಾಗಿದೆ, ವಾಹನಗಳ ದಟ್ಟಣೆಯಿಂದ ಆ ರಸ್ತೆಯಲ್ಲಿ ಸಾರ್ವಜನಿಕರಿಗೆ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಿದ್ದು ನಿತ್ಯ ತೀರ್ವ ತೊಂದರೆ ಆಗುತ್ತಿದೆ.

ಹಳೇ ಬಸ್ಟ್ಯಾಂಡನಿಂದ ಬರುವ ಹಾಗೂ ಹೊಸ ಬಸ್ಟ್ಯಾಂಡನಿಂದ ಹೋಗುವ ವಾಹನಗಳಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿ ವಿಶೇಷವಾಗಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಹಾಗೂ ಬೈಕ್ ಸವಾರರಿಗೆ ತೀರ್ವ ತೊಂದರೆ ಆಗುತ್ತಿದೆ ಅಲ್ಲದೇ ಅದೇ ರಸ್ತೆಯಲ್ಲಿ ಆಸ್ಪತ್ರೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕಗಳು ಇರುವುದರಿಂದ ಆಸ್ಪತ್ರೆ ಮತ್ತು ಬ್ಯಾಂಕ್ಗಳಿಗೆ ಬರುವ ಸಾರ್ವಜನಿಕರು ಬೈಕ್ಗಳನ್ನು ಮನಬಂದಂತೆ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಹೋಗಲು, ಬರಲು ಬಹಳ ತೊಂದರೆ ಆಗುತ್ತಿದೆ, ಒಂದೇ ಕಡೆ ರಸ್ತೆ ಸಂಚಾರ ಮಾಡುವದರಿಂದ ಅದನ್ನು ತಡೆಯ ಬಹುದಾಗಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ  ಅನುಕೂಲದ ದೃಷ್ಟಿಯಿಂದ ಪೊಲೀಸ್ಇಲಾಖೆಗೆ ಹಾಗೂ ಸಂಭಂದಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನದ ನೀಡಿ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. 

ಶಂಕರನಾಗ್ ಆಟೋ ಚಾಲಕರು, ಮಾಲಕರ ಸಂಘದ ಅದ್ಯಕ್ಷ ಗೌಸಮೋದಿನ ದುಂಡಿಶಿ, ಉಪಾದ್ಯಕ್ಷ ಗುರುನಗೌಡ ದುಂಡಿಗೌಡ್ರ, ಕಾರ್ಯದರ್ಶಿ  ಹನುಮಂತ ಬಂಡಿವಡ್ಡರ, ಖಜಾಂಚಿ ಮಂಜುನಾಥ ತಳವಾರ ಸದಸ್ಯ ನಾಗರಾಜ ಹಾವಣ್ಣವರ, ಶಣ್ಮುಖ ರಾಣಪ್ಪನವರ, ಖಾಸೀಮ ಹಲಗಿಬಡಿ, ಅಬ್ಬಾಸ್ ಅಲಿ, ತಾಜೂದ್ದೀನ್ ನದಾಫ್, ಅಶೋಕ ಗೌರಣ್ಣವರ, ಸದ್ದಾಂ ತಾಳಿಕೋಟಿ, ಸಚೀನ್ ಸೇರಿದಂತೆ ಉಳಿದ ಆಟೋ ಚಾಲಕರ ಸಂಘದ ಸದಸ್ಯರು ಇದ್ದರು.

ಸುದ್ದಿ ಓದಿ