ಬಳ್ಳಾರಿ

ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿಗೊಳಿಸಲು ಕರೆ

ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿಗೊಳಿಸಲು ಕರೆ
ಬಳ್ಳಾರಿ:ಅ 9: ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮದ ಅಂಗವಾಗಿ ಅಸಂಘಟಿತ ಕಾರ್ಮಿಕ ವಿಭಾಗದ ಸಭೆಯನ್ನು ಕರೆಯಲಾಯಿತು. ಹಾಗೂ ಈ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ, ತಂಗುವವ್ಯವಸ್ಥೆ,ಬ್ಯಾನರ್ ಹಾಕುವುದು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆ  ಅಸಂಘಟಿತ ಕಾರ್ಮಿಕ ವಿಭಾಗದಿಂದ ಸಭೆಯನ್ನು ಕರೆದು ಎಲ್ಲರೂ ರಾಹುಲ್ ಗಾಂಧೀಜಿಯವರ ಭಾರತ್ ಜೋಡೋ ಯಾತ್ರಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ತಮ್ಮ ತಮ್ಮ ಕಾರ್ಯದ ಪಾತ್ರವನ್ನು ವಹಿಸಲು ಸೂಚನೆಯನ್ನು ನೀಡಲಾಯಿತು.

ಈ ಪೂರ್ವಭಾವಿ ಸಭೆಯಲ್ಲಿ ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಅಲವೇಲು ಸುರೇಶ್ ರವರು ರಾಹುಲ್ ಜೀ ರವರ ಜೋಡೋ ಯಾತ್ರಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಅರ್ಥಗರ್ಭಿತವಾಗಿ ಯಶಸ್ವಿಯಾಗಿಸಲು ತಮ್ಮತಮ್ಮ ಕೊಡುಗೆ  ಅಮೂಲ್ಯವಾಗಿದ್ದು ಎಲ್ಲರೂ ಮನಸಾ ವಾಚಾ ಶ್ರಮಿಸಿ ಕ್ರಮಬದ್ಧವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಕೋರಲಾಯಿತು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರು ಅಲ ವೇಲ್ ಸುರೇಶ್ ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಕಾರ್ಯದರ್ಶಿಗಳು,ಸಂಘಟನಾ ಕಾರ್ಯದರ್ಶಿಗಳು ಪದಾಧಿಕಾರಿಗಳು ಸದಸ್ಯರು ಇತರರು ಭಾಗವಹಿಸಿದ್ದರು.

ಸುದ್ದಿ ಓದಿ