ತಾಳಿಕೋಟಿ

ಸರಕಾರದ ಯೋಜನೆ ಸದ್ಭಳಕೆ ಮಾಡಿಕೊಳ್ಳಿ : ಪಾಟೀಲ

ಸರಕಾರದ ಯೋಜನೆ ಸದ್ಭಳಕೆ ಮಾಡಿಕೊಳ್ಳಿ : ಪಾಟೀಲ

ತಾಳಿಕೋಟಿ : ರೈತಾಪಿ ಜನರನ್ನು ಆರ್ಥಿ ಕವಾಗಿ ಸಬಲೀಕರಣಗೊಳಿಸಲು ಸರಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಈ ಬಾರಿಯ ಬಜ್ಟ್ನಲ್ಲಿ ನಮ್ಮ ರೈತರಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ್ ಯಾಳಗಿ ಹೇಳಿದರು.

ಶನಿವಾರ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಕೃಷಿ ಇಲಾಖೆ ವಿಜಯಪುರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸನ್ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಅವರು ಮಾತನಾಡಿದರು.

ನಮ್ಮ ರೈತರು ಸಾಂಪ್ರದಾಯಿಕ ಕೃಷಿ ಪದ್ದತಿಯನ್ನೇ ಅವಲಂಬಿಸದೆ ವೈಜ್ಞಾನಿಕ ಕೃಷಿ ಪದ್ಧತಿ ತಿಳಿಯಲು ಪ್ರಯತ್ನಿಸಬೇಕು ಇದಕ್ಕಾಗಿ ಅವರು ಅಕ್ಷರಸ್ಥರಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್ಲ ಮಾತನಾಡಿ-ಸರಕಾರ ರೈತರ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ ಗುಣಮಟ್ಟದ ಬೀಜ ಮತ್ತು ಪರಿಕರಣಗಳನ್ನು  ಕೊಡುತ್ತದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಲು ಅಧಿಕಾರಿಗಳೊಂದಿಗೆ ಸಹನೆಯಿಂದ ವರ್ತಿಸಬೇಕು ಎಂದರು.

ಕೃಷಿ ಅಧಿಕಾರಿ ಮಹೇಶ ಜೋಶಿ ಅವರು ರೈತರಿಗೆ ಯೋಜನೆ ಮಾಹಿತಿ ನೀಡಿ-ಇಲಾಖೆಯೊಂದಿಗೆ ಸಹಕರಿಸುವಂತೆ ಕೇಳಿಕೊಂಡರು.

ಈ ಸಮಯದಲ್ಲಿ ಮುಖಂಡರಾದ ಬಿ.ಎಸ್. ಗಬಸಾವಳಗಿ, ಸಿದ್ದನಗೌಡ ಪಾಟೀಲ (ನಾವದಗಿ),  ಶರಣು ಧನಿ, ದೇಶಮುಖ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕುಂಬಾರ, ಕಾರ್ತಿಕ ಕಟ್ಟಿಮನಿ (ವಕೀಲರು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ವಿಜಯಸಿಂಗ್ ಹಜೇರಿ, ಸಂಗನಗೌಡ ಅಸ್ಕಿ,  ಮೋದಿನಸಾ ನಗಾರ್ಚೆ, ಪುರಸಭೆ ಸದಸ್ಯ, ಪರಶುರಾಮ ತಂಗಡಗಿ, ಕೃಷಿ ಅಧಿಕಾರಿ ಎಂ.ಎಚ್. ಬೀಳಗಿ, ಸಹಾಯಕ ಕೃಷಿ ಅಧಿಕಾರಿ ಎಸ್.ಬಿ. ಪಾಲ್ಕಿ, ಸಿಬ್ಬಂದಿ ವರ್ಗ ಇದ್ದರು 

ಸುದ್ದಿ ಓದಿ