ಅಮಟೂರ ಬಾಳಪ್ಪನ್ನವರ ಪುತ್ಥಳಿ ನಿರ್ಮಾಣ ಮಾಡಿ : ಹಣಬರ ಸಮಾಜದ ಮುಖಂಡರು
ಲೋಕದರ್ಶನ ವರದಿ
ಚಿಕ್ಕೋಡಿ 05: ಬ್ರಿಟಿಷರಿಗೆ ನಡುಕು ಹುಟ್ಟಿಸಿದ ವೀರ ಯೋಧ ಅಮಟೂರ ಬಾಳಪ್ಪನ್ನವರ ಶೌರ್ಯ ಇಂದಿನ ಯುವಕರಿಗೆ ತಿಳಿಸುವ ಮೂಲಕ ಸರ್ಕಾರ ಅಮಟೂರ ಬಾಳಪ್ಪನ್ನವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಬೆಳಗಾವಿ ಜಿಲ್ಲೆ ಹಣಬರ ಸಮಾಜದ ಮುಖಂಡರು ಒತ್ತಾಯಿಸಿದರು.
ಇಲ್ಲಿನ ಬಸವ ಸರ್ಕಲ ಬಳಿ ಬೆಳಗಾವಿ ಜಿಲ್ಲೆ ಹಣಬರ(ಯಾದವ) ಸಮಾಜ ಸೇವಾ ಸಂಘ ಚಿಕ್ಕೋಡಿ ವತಿಯಿಂದ ಕಿತ್ತೂರ ಸಂಸ್ಥಾನಕ್ಕೆ ತನ್ನ ಪ್ರಾಣವನ್ನು ಅರ್ಿಸಿದಿ ಹಣಬರ ಸಮಾಜದ ವೀರ ಕೇಸರಿ ಸ್ವಾತಂತ್ರ್ಯ ಹೋರಾಟಗಾರ ಅಮಟೂರ ಬಾಳಪ್ಪನ್ನವರ 197ನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಭೇಡಿಕೆ ಮಂಡಿಸಿದರು.
ಸ ಹಣಬರ ಸಮಾಜದ ಹಿರಿಯರಾದ ಎಸ್.ಬಿ.ಪೂಜಾರಿ ಮಾತನಾಡಿ, ಕಿತ್ತೂರ ಸಂಸ್ಥಾನದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಅಂಗರಕ್ಷಕನಾದ ಅಮಟೂರ ಬಾಳಪ್ಪನ್ನವರು ಬೈಲಹೋಂಗಲ ತಾಲೂಕಿನ ಅಮಟೂರ ಗ್ರಾಮದವರು. ಹಣಬರ ಸಮಾಜಕ್ಕೆ ಸೇರಿದ ಬಾಳಪ್ಪನ್ನವರು 1824ರಲ್ಲಿ ಬ್ರಿಟಿಷ ಸೇನಾಪತಿ ಥ್ಯಾಕರೆ ಸಾಹೇಬರನ್ನು ಗುಂಡಿಕ್ಕಿದ್ದ ವೀರ ಸೇನಾನಿಯಾಗಿದ್ದನು.
ಇಂತಹ ವೀರ ಸೇನಾನಿ ಅಮಟೂರ ಬಾಳಪ್ಪನ್ನವರ ಸಾಹಸ ಶೌರ್ಯ ಮೆಲುಕು ಹಾಕಲು ರಾಜ್ಯ ಸರ್ಕಾರ ವಿಧಾನಸೌಧ ಮತ್ತು ಸುವರ್ಣ ಸೌಧದ ಬಳಿ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡ ಶೀತಲ ಮುಂಡೆ, ಯುವ ಮುಖಂಡ ರುದ್ರ್ಪ ಸಂಗಪ್ಪಗೋಳ, ವಡ್ರಾಳ ಗ್ರಾ.ಪಂ ಅಧ್ಯಕ್ಷ ಆರ್.ಎನ್.ಪೂಜೇರಿ, ಸುಧಾಮ ಖಾಡ್, ಕಿರಣ ಶಿಂಗಾಯಿ, ಮಹಾದೇವ ಕರೋಶಿ, ಶಿವಾಜಿ ನಾಯಿಕ, ಅಪ್ಪಾಸಾಹೇಬ ನಾಯಕ, ಅಶೋಕ ಶಿಂಗಾಯಿ, ರಾಜು ನಾಯಿಕ, ಸುಭಾಷ ಕರೋಶಿ, ಸದಾಶಿವ ಖೋತ, ಎಸ್.ಬಿ.ಪಾಟೀಲ, ರಾಜು ಸಂಕೇಶ್ವರಿ, ಅಪ್ಪಾಸಾಹೇಬ ನಾಯಿಕ, ಅಪ್ಪಾಯ್ಯ ನಾಯಿಕ, ಶಿವರಾಜ ನಾಯಿಕ ಮುಂತಾದವರು ಇದ್ದರು.