ಸೌಂದತ್ತಿ

ಅರಣ್ಯ ಇಲಾಖೆ ಅಧಿಕಾರಿಗಳಿಂದ 6 ಲಕ್ಷ ಮೌಲ್ಯದ ಮಾಕಳಿ ಬಳ್ಳಿ ವಶ

ಅರಣ್ಯ ಇಲಾಖೆ ಅಧಿಕಾರಿಗಳಿಂದ 6 ಲಕ್ಷ ಮೌಲ್ಯದ ಮಾಕಳಿ ಬಳ್ಳಿ ವಶ

ಆಂಧ್ರ ಪ್ರದೇಶ ಮೂಲದ ಐವರು ಆರೋಪಿಗಳ ಬಂಧನ 

ಸವದತ್ತಿ 07: ಗೋಕಾಕ ಅರಣ್ಯ ವಿಭಾಗದ ಸವದತ್ತಿ ಪ್ರಾದೇಶಿಕ ಅರಣ್ಯ ವಲಯದ ಹೂಲಿ ಶಾಖೆಯ ಶಿಂಧೋಗಿ ಗಸ್ತಿನ ಯಕ್ಕೇರಿ, ಹೂಲಿ, ಗೊರಾಬಾಳ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಆಂಧ್ರ​‍್ರದೇಶ ಮೂಲದ ಆರೋಪಿಗಳಾದ 1)ಸವರಂ ರಾವಣಯ್ಯ 2)ಕೊಮ್ಮಿ ರಂಗನಾಯಕುಲು 3)ಕಾಕಿ ರಾಮಾಂಜನೆಯಲು, 4)ಸವರಂ ದುರ್ಗಾ ಪ್ರಸಾದ 5) ಗುಂಡಲ ನಾರಾಯಣ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ ಆಯುರ್ವೇದ ಗಿಡಮೂಲಿಕೆ, ಅನೇಕ ವೈದ್ಯಕೀಯ ಗುಣಗಳುಳ್ಳ ಹಾಗೂ ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧವಾದ ಮಾಕಳಿ(ನನ್ನಾರಿ) ವೈಜ್ಞಾನಿಕ ಹೆಸರು ಆಜಛಿಚಿಟಜಠಿ ಚಿಟಟಣಠ ಎಂಬ ಬಳ್ಳಿಯ ಬೇರನ್ನು ಅನಧೀಕೃತವಾಗಿ ಸಂಗ್ರಹಿಸಿದ್ದರ ಕುರಿತು ದಾಳಿ ಮಾಡಿ ಅಂದಾಜು ರೂ.6 ಲಕ್ಷ ಮೌಲ್ಯದ 1250 ಮಾಕಳಿ ಬೇರನ್ನು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಸವದತ್ತಿ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.  

ಆಂಥೋನಿ ಎಸ್‌. ಮರಿಯಪ್ಪ, ಡಿ.ಸಿ.ಎಫ್, ಗೋಕಾಕ ಮತ್ತು ರಾಜೇಶ್ವರಿ ಈರನಟ್ಟಿ, ಎ.ಸಿ.ಎಫ್, ರಾಮದುರ್ಗ ರವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ, ಶಂಕರ ಅಂತರಗಟ್ಟಿ ರವರ ನೇತೃತ್ವದಲ್ಲಿ ಕೃಷ್ಣಾ ಟಿ. ಪೂಜೇರಿ, ಡಿ.ಆರ್‌.ಎಫ್‌.ಓ, ಸಿಬ್ಬಂದಿಗಳಾದ ರಮೇಶ ಪಾಟೋಳಿ, ಈರಣ್ಣ ಕೆಂಗಾನೂರ, ಗುರನಗೌಡ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ