ತಾಳಿಕೋಟಿ

ಗುರು ಪಟ್ಟಾಧಿಕಾರಿ ಮಹೋತ್ಸವದ ಪತ್ರಿಕೆ ಲೋಕಾರ್ಪಣೆ ಸಮಾರಂಭ

ಗುರು ಪಟ್ಟಾಧಿಕಾರಿ ಮಹೋತ್ಸವದ ಪತ್ರಿಕೆ ಲೋಕಾರ್ಪಣೆ ಸಮಾರಂಭ

ತಾಳಿಕೋಟಿ : ತಾಲೂಕಿನ ನಾವದಗಿ ಗ್ರಾಮದ ಶ್ರೀ ಬೃಹನ್ ಮಠದ ಪರಮಪೂಜ್ಯ ರಾಜೇಂದ್ರ ಒಡೆಯರ ಪಟ್ಟದೇವರು ಇವರ ಗುರು ಪಟ್ಟಾಧಿಕಾರ ಮಹೋತ್ಸವದ ಪ್ರಕಟಣೆ ಪತ್ರಿಕೆ ಲೋಕಾರ್ಪಣೆ ಸಮಾರಂಭ ಕೊಡೆಕಲ್ ದುರದುಂಡೇಶ್ವರ ಮಠದ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ  ರವಿವಾರ ನಾವದಗಿ ಗ್ರಾಮದಲ್ಲಿ ಜರುಗಿತು. ಪತ್ರಿಕೆ ಲೋಕಾರ್ಪಣೆ ಮಾಡಿ ತಮ್ಮ ಆಶೀರ್ವಚನದಲ್ಲಿ ಶಿವಕುಮಾರ್ ಮಹಾಸ್ವಾಮಿಗಳು ಫೆಬ್ರುವರಿ 27ರಿಂದ 29ರ ವರೆಗೆ ನಡೆಯಲಿರುವ ಶ್ರೀ ರಾಜೇಂದ್ರ ಒಡೆಯರ್ ಇವರ ಗುರು ಪಟ್ಟಾಧಿಕಾರ ಕಾರ್ಯಕ್ರಮದ ಪತ್ರಿಕೆ ಇಂದು ಲೋಕಾರ್ಪಣೆಗೊಳಿಸಿದ್ದೇವೆ ಈ ಕಾರ್ಯಕ್ರಮದ ಯಶಸ್ವಿ ಎಲ್ಲ ಭಕ್ತರದ್ದಾಗಿದೆಯಾದರೂ ವಿಶೇಷವಾಗಿ ನಾವದ್ಗಿ ದೈವದ ಶ್ರಮ ಬಹಳವಿದೆ ನೀವೆಲ್ಲರೂ ಸೇರಿ ಕಾರ್ಯಕ್ರಮದ ರೂಪರೇಷೆಯಂತೆ ಶಕ್ತಿಮೀರಿ ಪ್ರಯತ್ನ ಮಾಡಿದ್ದಲ್ಲಿ ಈ ಕಾರ್ಯಕ್ರಮ ಯಶಸ್ವಿ ಯಾಗುತ್ತದೆ  ಎಂದರು. ಬೇಡ ಜಂಗಮ ಸಮಾಜದ ರಾಷ್ಟ್ರೀಯ ಗೌರವಾಧ್ಯಕ್ಷರಾದ ಜ್ಯೋತಿಷ್ಯ ರತ್ನ ಜಚಬನೂರು ಹಿರೇಮಠದ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ನಿಮ್ಮ  ಗ್ರಾಮಕ್ಕೆ ಮೂರು ಜಗದ್ಗುರುಗಳು ಆಗಮಿಸಲಿದ್ದಾರೆ ನಾವದಗಿಯ ದೈವದ ಪಾತ್ರ ಇದರಲ್ಲಿ ಬಹಳ ದೊಡ್ಡದಿದೆ ಈ ಭಾಗದ ಎಲ್ಲ ಪೂಜ್ಯರು ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ ಇಲ್ಲಿ ಸುಮಾರು 15ರಿಂದ 20 ವಿವಿಧ ವಿಭಾಗಗಳನ್ನು ಮಾಡಿ ಕೆಲಸ ಮಾಡಬೇಕಾಗಿದೆ ಸಿಸ್ತುಬದ್ಧವಾಗಿ ಎಲ್ಲ ಕಾರ್ಯಕ್ರಮವನ್ನು ಮಾಡಿದಲ್ಲಿ ಗುರು ಪಟ್ಟಾಧಿಕಾರ ಮಹೋತ್ಸವ ಯಶಸ್ವಿಯಾಗೋದ್ರಲ್ಲಿ ಎರಡು ಮಾತಿಲ್ಲ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ವಣಕಿಹಾಳ ಮಾತನಾಡಿ ನಮ್ಮ ಗ್ರಾಮಕ್ಕೆ ಮೂವರು ಜಗದ್ಗುರುಗಳು ಬರುತ್ತಿದ್ದಾರೆ ಇವರ ಪಾವನ ಪಾದಗಳು ನಮ್ಮೆಲ್ಲ ಭಕ್ತರ ಬದುಕು ಹಸನ ಗೊಳಿಸಲಿದೆ ಹೊರಗಿನ ಗ್ರಾಮದ ಭಕ್ತರ ಸಹಕಾರ ಜೊತೆಗೆ ನಾವದ್ಗಿ ದೈವದ ಜವಾಬ್ದಾರಿ ಬಹಳಷ್ಟಿದೆ ನಾವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತನು ಮನ ಧನದಿಂದ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದರು.  ತಾಳಿಕೋಟಿ ಮಹಾಂತ ಶ್ರೀಗಳು ಪತ್ರಿಕೆಯ ವಿವರಗಳನ್ನು ಸಭೆಗೆ ತಿಳಿಸಿದರು. ಈ ಸಮಾರಂಭದಲ್ಲಿ ಬ್ರಹನ್ ಮಠದ ಪೀಠಾಧಿಪತಿ ಪರಮ ಪೂಜ್ಯ ಶ್ರೀ ರಾಜೇಂದ್ರ ಒಡೆಯರ್ ಪಟ್ಟದೇವರು ಕಾರ್ಯಕ್ರಮದ ಸಮ್ಮುಖವನ್ನು ವಹಿಸಿದ್ದರು ನಾವದಗಿಯ ದೈವದವರು. ಜನಪ್ರತಿನಿಧಿಗಳು ಗ್ರಾಮದ ಗಣ್ಯರು ಸುತ್ತಮುತ್ತಲಿನ ಗ್ರಾಮಗಳ ಅಪಾರಭಕ್ತರು ಉಪಸ್ಥಿತರಿದ್ದರು

ಸುದ್ದಿ ಓದಿ