ಮಹೇಶ್ವರಪ್ಪಗೆ ಪಿಎಚ್ಡಿ ಪದವಿ
ರಾಣೇಬೆನ್ನೂರ ಏ 6:-ಇಲ್ಲಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಬಿ. ಮಹೇಶ್ವರಪ್ಪ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಗೌರವ ಪದವಿಗೆ ಭಾಜನರಾದ ಮಹೇಶ್ವರಪ್ಪ ಅವರಿಗೆ ದಾವಣಗೆರೆಯ ಯು.ಬಿ.ಡಿ.ಟಿ. ಕಾಲೇಜಿನ ಡಾ. ಸುದರ್ಶನ್ ರೆಡ್ಡಿ ಅವರು ಮಾರ್ಗದರ್ಶಕರಾಗಿದ್ದರು. ಸ್ಥಳೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಶಿವಕುಮಾರ ಮತ್ತು ಉಪನ್ಯಾಸಕರು ಸಿಬ್ಬಂದಿ ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.