ಮಹಾತ್ಮ ಗಾಂಧೀಜಿ ಜಯಂತಿ, ಲಾಲ್ ಬಹುದ್ದೂರು ಶಾಸ್ತ್ರಿ ಜಯಂತಿ ಆಚರಣೆ
ರಾಣಿಬೆನ್ನೂರು 04: ಇಲ್ಲಿನ ಚೋಳಮರಡೇಶ್ವರ ನಗರದ ಮಾತ ಪಬ್ಲಿಕ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯ 154ನೇ ಜಯಂತಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ 119 ನೇ ಜಯಂತಿ ಆಚರಿಸಲಾಯಿತು.
ಈ ವೇಳೆ ಮುಖ್ಯೋಪಾಧ್ಯಯ ಚನ್ನಬಸಪ್ಪ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿಯವರು ಮುಂಚೂಣಿಯಲ್ಲಿದ್ದರು ಅವರ ಉಪ್ಪಿನ ಸತ್ಯಾಗ್ರಹ ನಡೆಸುವ ಮೂಲಕ ಬ್ರೀಟೀಷರಿಗೆ ನಡುಕ ಹುಟ್ಟಿಸಿದ್ದರು. ಶಿಕ್ಷಕಿಯರಾದ ಪುಷ್ಪ ಉಜ್ಜಿಯರ, ಆಶಾ ಬಿಎ, ನಾಗೇಂದ್ರ ಮಡಿವಾಳರ, ಪ್ರವೀಣ್‌ಗೌಡ ಪಾಟೀಲ, ದೀಪಾ ಆರ್, ದುರ್ಗಮ್ಮ ಬೆನ್ನೂರು, ಗೀತಾ ಕಮ್ಮಾರ, ಐಶ್ವರ್ಯ ಎಂ.ಎಸ್, ಚೈತ್ರ ಸಿ.ಪಿ, ನವೀನ, ಹಾಗೂ ವಿದ್ಯಾರ್ಥಿಗಳು ಇದ್ದರು.