ಮಹಾತ್ಮ ಗಾಂಧೀಜಿ,ಲಾಲ್ ಬಹುದ್ದೂರ್ ಶಾಸ್ತ್ರೀ ಜಯಂತಿ
ರಾಣೇಬೆನ್ನೂರು 06: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರೀ ಅವರ ಜಯಂತೋತ್ಸವ ದಿನಾಚರಣೆಯು ಸರಳವಾಗಿ ಕಾಲೇಜು ಆವರಣದಲ್ಲಿ ಆಚರಿಸಲಾಯಿತು. ಗಾಂಧೀಜಿಯವರ ಚಿಂತನೆಗಳು ದೇಶದ ಅಭಿವೃದ್ಧಿ, ಶಾಂತಿ ಸೌಹಾರ್ದತೆ ಕುರಿತಂತೆ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಮುನಿಯಪ್ಪ ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ಇತಿಹಾಸ ಉಪನ್ಯಾಸಕ ಎಂ.ಶಿವಕುಮಾರ, ಶಿಕ್ಷಕ ಬಿ.ಎ.ವಿಜಯಕುಮಾರ, ಯೋಜನಾಧಿಕಾರಿ ಹೆಚ್.ಶಿವಾನಂದ ಶಿಕ್ಷಕರಾದ ಎಸ್.ಎಸ್.ಬಡ್ನಿ, ಕೆ.ಜೆ.ಆಶಾ, ಉಮ್ಮೇಹಭೀಬ, ಸುಚಿತ್ರಾ.ಜಿ, ಸಿ.ಜೈಪ್ರಕಾಶ್, ಜಿ.ಬಿ.ಪ್ರಸನ್ನಕುಮಾರ, ಆರ್.ಪ್ರವೀಣಕುಮಾರ, ಗಣೇಶ ಹಿರೇಮಠ ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ನಾಗರೀಕರು ಉಪನ್ಯಾಸಕರು ಉಪಸ್ಥಿತರಿದ್ದರು.