ಮಹಾದೇವ ಮಂದಿರದ ತ್ರಿಲಿಂಗಕ್ಕೆ ವಿಶೇಷ ಪೂಜೆ
ಚಿಕ್ಕೋಡಿ 12: ಮಹಾಶಿವರಾತ್ರಿ ನಿಮಿತ್ಯ ಇಲ್ಲಿನ ಹೊಸಪೇಠ ಗಲ್ಲಿಯಲ್ಲಿರುವ ಪುರಾತನ ಕಾಲದ ಶ್ರೀ ಮಹಾದೇವ ದೇವಸ್ಥಾನದ ತ್ರಿಲಿಂಗಕ್ಕೆ ವಿಶೇಷ ಪೂಜೆ ಪುನ:ಸ್ಕಾರ ಅದ್ದೂರಿಯಾಗಿ ನಡೆಯಿತು. ಸರದಿ ಸಾಲಲ್ಲಿ ನಿಂತು ಭಕ್ತರು ಶಿವನ ದರ್ಶನ ಪಡೆದು ಪುನಿತರಾದರು.
ಐತಿಹಾಸಿಕ ಕ್ಷೇತ್ರವಾಗಿರುವ ಚಿಕ್ಕೋಡಿ ನಗರದ ಮಹಾದೇವ ಮಂದಿರದಲ್ಲಿ ಉದ್ಬವಾಗಿರುವ ತ್ರಿಲಿಂಗದ ದರ್ಶನಕ್ಕಾಗಿ ನಗರದ ಹಾಗೂ ಗಡಿ ಭಾಗದ ಸಾವಿರಾರು ಭಕ್ತಾಧಿಗಳು ಆಗಮೀಸಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿ ದರ್ಶನ ಪಡೆದುಕೊಂಡರು.
ಬುಧವಾರ ರಾತ್ರಿ 1 ಗಂಟೆಯಿಂದಲೇ ಪ್ರಾರಂಭವಾದ ಅಭಿಷೇಕ ಹಾಗೂ ವಿಶೇಷ ಪೂಜೆಗಳು ಬೆಳಗ್ಗಿನ ಜಾವ 8 ರವರಿಗೆ ನಡೆಯಿತು. ನಂತರ ನಗರದ ವಿವಿಧ ಬಡಾವಣೆಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ಮಹಾದೇವ ಉತ್ಸವ ಮೂರ್ತಿಗಳ ಮೆರವಣಿಗೆ ವಿಜ್ರಂಭನೆಯಿಂದ ನಡೆಯಿತು.
ಗುರುವಾರ ರಾತ್ರಿ ದೇವಸ್ಥಾನದಲ್ಲಿ ಭಕ್ತಾಧಿಗಳ ಶಿವನ ಜಾಗರನೆ ನಡೆಯಲಿದ್ದು, ಶುಕ್ರವಾರ ಮುಂಜಾನೆ ತ್ರಿಲಿಂಗಕ್ಕೆ ವಿಶೇಷ ಪೂಜೆ ನಡೆಯುತ್ತದೆ. ಮಧ್ಯಾಹ್ನ 12 ಗಂಟೆಗೆ ಶಿವಮಹಾಪ್ರಸಾದ ನಡೆಯಲಿದೆ ಎಂದು ಶಿವಶಂಕರ ಶಾಸ್ತ್ರಿಗಳು ಹೇಳಿದರು.