ಸಂಕೇಶ್ವರ

ನಿಡಸೋಸಿಯಲ್ಲಿ ಸಂಭ್ರಮದಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ನಿಡಸೋಸಿಯಲ್ಲಿ ಸಂಭ್ರಮದಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ಮಹೋತ್ಸವ ಕ್ಕೆ 9ವರ್ಷ* ನಿತ್ಯ ನಡೆಯುತ್ತಿವೆ ಭಕ್ತಿ, ಅನ್ನ, ಜ್ಞಾನ ದಾಸೋಹಗಳು* ರಾತ್ರಿ 12 ಗಂಟೆಯವರೆಗೆ ಕಾರ್ಯಕ್ರಮಗಳು 

ವರದಿ : ಎಂ.ಬಿ.ಘಸ್ತಿ  

ಸಂಕೇಶ್ವರ ಗ್ರಾಮೀಣ ಭಾಗದಲ್ಲಿ ನಿಡಸೋಸಿಯಂತ ಪುಟ್ಟಗ್ರಾಮದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಪಾಲಿಟೆಕ್ನಿಕ್‌ಕಾಲೇಜು, ಇಂಜೀನೀಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದು ನಿಡಸೋಸಿ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನಮಠದ ಹಿಂದಿನ ಶ್ರೀಗಳಾದ ನಿಜಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಈಗಿನ ಪೀಠಾಧಿಕಾರಿಗಳಾದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿರಂತರ ಪರಿಶ್ರಮ ಹಾಗೂ ದೂರದೃಷ್ಟಿಗಳೇ ಕಾರಣವಾಗಿವೆ.  ಹಿಂದಿನ ಶ್ರೀಗಳು ಹಾಗೂ ಈ ಭಾಗದಕಾಯಕಯೋಗಿ ಹಾಗೂ ಸಹಕಾರ ಮಹರ್ಷಿ ದಿ. ಬಸಗೌಡಾ ಪಾಟೀಲ, ದಿ.ವಿಶ್ವನಾಥಕತ್ತಿ, ವಿಠ್ಠಲರಾವ ಜೋಶಿ, ಹಾಗೂ ಈಗಿನ ಸಹಕಾರಿರಂಗದ ಹಿರಿಯಜೀವ ಡಿ.ಟಿ.ಪಾಟೀಲ, ಇವರೆಲ್ಲರ ಪ್ರಾಮಾಣಿಕ ಪ್ರಯತ್ನದೂರದೃಷ್ಟಿ, ಹಿರಣ್ಯಕೇಶಿ ಸಹಕಾರಿ ಸಕ್ಕರೆಕಾರಖಾನೆಕಬ್ಬು ಬೆಳೆಗಾರ ರೈತರ ಸಹಕಾರ ಈ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿಇವರೆಲ್ಲರ ಸಹಕಾರ ಮುಖ್ಯವಾಗಿದೆ.  ಮಠದ ಈಗಿನ ಶಿವಲಿಂಗೇಶ್ವರ ಮಹಾಸ್ವಾಮಿಗಳು ಈ ಶಿಕ್ಷಣ ಸಂಸ್ಥೆಗಳನ್ನು ಉತ್ತುಂಗಕ್ಕೆಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 

ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಇವರ ಮುಂದಾಳತ್ವದಲ್ಲಿ ಸಿಬಿಎಸ್‌ಇ ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗೆ, ಬಿಸಿಎ ಪದವಿ ಕಾಲೇಜು, ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜುಗಳು ಈಗಾಗಲೇ ಪ್ರಾರಂಭಗೊಂಡಿವೆ  ಬಿ.ಕಾಂ, ಬಿಎಸ್‌ಸಿ ಪದವಿ ಕಾಲೇಜುಗಳಿಗೆ ಇತ್ತೀಚಿಗೆ ಸರ್ಕಾರದಿಂದ ಅನುಮತಿ ದೊರೆತಿದ್ದು ಬರುವ ಜೂನ್ ತಿಂಗಳಿನಿಂದ ಕಾಲೇಜುಗಳಿಗೆ ಪ್ರವೇಶ ಪ್ರಾರಂಭವಾಗಲಿವೆ.  ಈ ಎಲ್ಲ ಶೈಕ್ಷಣಿಕ ಕಾಲೇಜುಗಳು ಗ್ರೇಡ್‌-1 ರಾ​‍್ಯಂಕ್ ಪಡೆದುಕೊಂಡಿವೆ. ಇಂಜೀನೀಯರಿಂಗ್ ಕಾಲೇಜಿಗೆ ನ್ಯಾಕ್ ಎನ್‌ಬಿಎ ಇಐಸಿಟಿಇ ಯಿಂದ ಮಾನ್ಯತೆ ಪಡೆದುಕೊಂಡಿದೆ. ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳು ವಸತಿ ನಿಲಯಗಳು ಹಾಗೂ ಜಾಗೆ ಸೇರಿಸುಮಾರು 300 ಕೋಟಿ ರೂಪಾಯಿಗಳಷ್ಟು ಆಸ್ತಿ ಬೆಲೆ ಬಾಳುತ್ತವೆ.  ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ತಲೆಎತ್ತಿ ನಿಂತಿದ್ದು, ಈ ಸಂಸ್ಥೆಗಳಲ್ಲಿ ಸುಮಾರು 10 ಸಾವಿರ ದಿಂದ 12 ಸಾವಿರದವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಈ ಶಿಕ್ಷಣ ಸಂಸ್ಥೆಗಳಲ್ಲಿ ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನಿಂದ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ಹುಕ್ಕೇರಿ ತಾಲೂಕು, ಮೊದಲಾದ ಕಡೆಗಳಿಂದ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ಬಂದು ಹೋಗಲು ಸುಮಾರು 18 ಬಸ್ಸುಗಳ ವ್ಯವಸ್ಥೆಯನ್ನು ಮಾಡಿದ್ದಾರೆ. 

ನಿಡಸೋಸಿ ಶ್ರೀಮಠದ ಮಹಾಸ್ವಾಮಿಗಳು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವಿದ್ಯಾದಾನವನ್ನು ಪಡೆದುಕೊಂಡು ತಮ್ಮ ಹಾಗೂ ಕುಟುಂಬದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಧರ್ಮ, ಸನಾತನ ಸಂಸ್ಕೃತಿ, ಉಳಿಯಬೇಕು, ಬಸವ ತತ್ವದ ಆಧಾರದ ಮೇಲೆ ಮಾನವಕಲ್ಯಾಣ ಆಗಬೇಕು ಎಂಬ ಸದುದ್ದೇಶಗಳನ್ನು ಹೊಂದಿದ್ದಾರೆ. ಕೊರೊನಾ ಮಹಾಮಾರಿಯಂತಹ ಭೀಕರ ಹಾಗೂ ಸಂದಿಗ್ಧ 2 ವರ್ಷಗಳ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಗೌರವ ಶಿಕ್ಷಕರಿಗೂ ಕೂಡ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡಿ ಅವರ ಕುಟುಂಬ ನಿರ್ವಹಣೆ ಮಾಡಲು ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಈ ಸಂಸ್ಥೆಗಳಲ್ಲಿ ಸುಮಾರು ನಾಲ್ಕೈದು ನೂರು ಜನರು ದುಡಿಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಡೋನೇಶನ್ ಹಾವಳಿ ಬಂದ ಮಾಡಲಾಗಿದ್ದು ಶಾಲಾ ಕಾಲೇಜುಗಳ ಶುಲ್ಕವನ್ನು ಸರ್ಕಾರವು ಹೆಚ್ಚಿಸಿದ್ದಾರೆ. ಆದರೆ ಇಲ್ಲಿಯ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಹೆಚ್ಚಿನ ಶುಲ್ಕವನ್ನು ಏಕಕಾಲದಲ್ಲಿ ಪಾವತಿಸಲು ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ ಶ್ರೀಗಳು ಮಕ್ಕಳಿಗೆ ಕಂತುಗಳಲ್ಲಿ ಶುಲ್ಕ ಪಾವತಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲಿ ಅಡಚಣೆಗಳು ಉಂಟಾಗದಂತೆ ನೋಡಿಕೊಂಡಿದ್ದಾರೆ. ಸಂಸ್ಥೆಗಳಲ್ಲಿ ಯಾವುದೇ ಆರ್ಥಿಕ ತೊಂದರೆಗಳು ಬಂದರೆ ಶ್ರೀಮಠದಿಂದ ನೆರವನ್ನು ನೀಡಿ ಶೈಕ್ಷಣಿಕ ಸಂಸ್ಥೆಗಳು ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. 

ಶ್ರೀಗಳಿಗೆ ಈಗ 79 ವರ್ಷ ವಯಸ್ಸು ಇದ್ದು ತುಂಬಾ ಲವಲವಿಕೆಯಿಂದ ಎಲ್ಲ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಭಕ್ತರು ಕರೆದಲ್ಲಿ ಹೋಗಿ ಆಶೀರ್ವಚನ ಮಾಡುತ್ತಾರೆ. ದಿನಾಲು 6-7 ಕಿಮೀ ನಡೆಯುವ ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ದಿನನಿತ್ಯದ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ.  ಹೊಲಕ್ಕೆ ಹೋಗಿ ಬರುತ್ತಾರೆ.  ಗೋಶಾಲೆಗಳಿಗೆ ಭೇಟಿ ನೀಡಿ ಗೋವುಗಳ ಮೇಲ್ವಿಚಾರಣೆ ಮಾಡುತ್ತಾರೆ. ಎಲ್ಲ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಶ್ರೀಗಳು ಉತ್ಸಾಹದ ಚಿಲುಮೆಯಾಗಿದ್ದು. ದಣಿವು ಎಂಬುದನ್ನು ಅರಿಯದವರು ಆಗಿದ್ದಾರೆ.  ಉತ್ತರ ಕರ್ನಾಟಕ ಪ್ರಮುಖ ಮಹಾಸ್ವಾಮಿಗಳಾಗಿರುವ ಇವರು ಮಹಾವಿದ್ವಾಂಸ ಪಂಡಿತರಾಗಿದ್ದಾರೆ. ಈ ಭಾಗದ ಭಕ್ತರು ಇವರನ್ನು ನಡೆದಾಡುವ ದೇವರೆಂದು ಭಾವಿಸಿದ್ದಾರೆ. ನಿಡಸೋಸಿ ದುರದುಂಡೀಶ್ವರ ಮಠವು ಉತ್ತರ ಕರ್ನಾಟಕ ಹಾಗೂ ಕರ್ನಾಟಕ ಮಹಾರಾಷ್ಟ್ರ ಗೋವಾ ಗಡಿಭಾಗದ ಪ್ರಮುಖ ಪುಣ್ಯ ಪೀಠವಾಗಿದೆ. ನಿಡಸೋಸಿ ಮಠದಲ್ಲಿ ಮಹಾಶಿವರಾತ್ರಿ ಮಹಾಜಾತ್ರೆಯು 9ನೇ ವರ್ಷದಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಭಕ್ತಿದಾಸೋಹ, ಅನ್ನದಾಸೋಹ, ಜ್ಞಾನ ದಾಸೋಹಗಳು ಈ ಸಂದರ್ಭದಲ್ಲಿ ನಡೆಯುತ್ತವೆ. 

ಪ್ರತಿನಿತ್ಯರಾತ್ರಿ 12 ಗಂಟೆಯವರೆಗೆ ಈ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಭಕ್ತಿಸೇವೆಯಲ್ಲಿ ಸಂತೋಷ ಪಾಟೀಲ, ಸಂಜು ಪಾಟೀಲ, ರಾಜು ಯರಗಟ್ಟಿ, ರಾಯಪ್ಪ ನಿಂಗನೂರಿ, ಮಲ್ಲಪ್ಪಾ ತನೋಡಿ, ಗೀರೀಶ ಪಾಟೀಲ, ಪ್ರಕಾಶ ಕುಂಬಾರ, ಮಹಾಲಿಂಗ ನಿಂಗನೂರಿ, ಮಹಾವೀರ ಖಾನಾಪೂರೆ, ಸಾತಪ್ಪಾ ಕಾರತಗಿ, ಗುರಾ​‍್ಪ ಪಟೋಳಿ, ಮಲ್ಲಿಕಾರ್ಜುನ ತನೋಡಿ ಮೊದಲಾದ ನಿಡಸೋಸಿ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತಿದ್ದಾರೆ.  ಶಿವರಾತ್ರಿ ಮಹಾಜಾತ್ರೆಯನ್ನು ಯಶಸ್ವಿಗೊಳಿಸತ್ತಿದ್ದಾರೆ. 


ಸುದ್ದಿ ಓದಿ