ಬೈಲಹೊಂಗಲ

ಮಹಾಶಿವರಾತ್ರಿ: ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಮಹಾಶಿವರಾತ್ರಿ: ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ
ಬೈಲಹೊಂಗಲ ನೀರಾವರಿ ಇಲಾಖೆ ಆವರಣದಲ್ಲಿರುವ ಪಂಚವಟಿ ಶಿವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಕ್ತರು ಶಿವನ ಪ್ರತಿಮೆಗೆ ಪು

ಬೈಲಹೊಂಗಲ 11- ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಗುರುವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಭಕ್ತರು ಬೆಳಗ್ಗೆಯಿಂದ  ದೇವಸ್ಥಾನಗಳಿಗೆ ತೆರಳಿ ನೈವೇದ್ಯ ಅಪರ್ಿಸಿ ಪೂಜೆ ಸಲ್ಲಿಸಿದರು. ಇತಿಹಾಸ ಪ್ರಸಿದ್ಧ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದ ಈಶ್ವರಲಿಂಗ ಪ್ರತಿಮೆಗೆ ತರತರನಾದ ಪುಷ್ಪಮಾಲೆಗಳನ್ನು ಹಾಕಿ ಪೂಜೆ ಸಲ್ಲಿಸಲಾಯಿತು. ಶಿವನ ಪ್ರತಿಯೊಂದು ದೇವಸ್ಥಾನಗಳಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು. 

ದೇವಿ ಆರಾಧಕ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಪಂಚವಟಿ ಶಿವಾಲಯದಲ್ಲಿ ಶಿವನ ಪೂಜೆ ನೆರವೇರಿಸಿ ಮಾತನಾಡಿ, ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.  ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸಬೇಕು. ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾನೆ ಎಂದರು.

ದಕ್ಷಿಣ ಕಾಶಿಯಂದೇ ಪ್ರಖ್ಯಾತಿ ಆಗಿರುವ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನ, ಗೊಂಬಿ ಗುಡಿ ಈಶ್ವರ ದೇವಸ್ಥಾನ, ನೀರಾವರಿ ಇಲಾಖೆ ಆವರಣದಲ್ಲಿರುವ ಪಂಚವಟಿ ದೇವಸ್ಥಾನ, ಮರಡಿ ಗಲ್ಲಿಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನ, ಮರಡಿ ಬಸವೇಶ್ವರ ದೇವಸ್ಥಾನ, ಮಡಿವಾಳೇಶ್ವರ ದೇವಸ್ಥಾನ, ಹಳೆ ಹನುಮಂತ ದೇವರ ದೇವಸ್ಥಾನ, ಕೆಇಬಿ ಗಣೇಶ ದೇವಸ್ಥಾನ, ಎಪಿಎಂಸಿ ಆವರಣ ಗಣೇಶ ದೇವಸ್ಥಾನ, ಬಸವನಗರದ ದುಗರ್ಾಪರಮೇಶ್ವರಿ ದೇವಸ್ಥಾನ, ಅನ್ನಪೂಣರ್ೇಶ್ವರಿ ದೇವಸ್ಥಾನ, ಇಂದಿರಾ ನಗರದ ಶಿವಾಲಯದಲ್ಲಿ, ಸಾಯಿ ಮಂದಿರ, ರಾಘವೇಂದ್ರ ದೇವಸ್ಥಾನ, ಜವಳಿ ಕೂಟದ ಜಡಿ ಶಂಕರಲಿಂಗ ದೇವಸ್ಥಾನ, ಉದ್ಭವ ಚನ್ನಬಸವೇಶ್ವರ ಮಂದಿರ, ಈಟಿ ಬಸವೇಶ್ವರ ಮಂದಿರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ದೇವಸ್ಥಾನ, ಮಠಗಳಲ್ಲಿ ಪೂಜೆ, ಪ್ರಾರ್ಥನೆ ನಡೆಯಿತು. 

ಅರ್ಚಕ ರವಿ ಶಾಸ್ರ್ತಿ , ಸಣ್ಣಪುಂಡಲೀಕ ಹೋಟಿ, ಗೀತಾ ಹೋಟಿ ಮತ್ತಿತರರು ಇದ್ದರು.

 

ಸುದ್ದಿ ಓದಿ