ಕಂಪ್ಲಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿಯ ಭವ್ಯ ಮೆರವಣಿಗೆ
ಕಂಪ್ಲಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿಯ ಭವ್ಯ ಮೆರವಣಿಗೆ
ಕಂಪ್ಲಿ 24: ಕಂಪ್ಲಿ ನಗರದುದ್ದಕ್ಕೂ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಾಹಾಸ್ವಾಮೀಜಿ ಹಾಗೂ ಶಾಸಕ ಜೆ.ಎನ್.ಗಣೇಶ್ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಗುರುವಾರ ಜರುಗಿತು. ಸ್ವಾಮೀಜಿ ಅವರನ್ನು ಬೆಳ್ಳಿ ರಥದೊಂದಿಗೆ ಇಲ್ಲಿನ ಉದ್ಭವ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಮೆರವಣಿಗೆ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದೊಂದಿಗೆ ಸಂಚರಿಸಿ, ನೂತನ ವಾಲ್ಮೀಕಿ ಸಮುದಾಯ ಭವನ ಬಳಿ ಸಮಾವೇಶಗೊಂಡಿತು. ಇಲ್ಲಿನ ಮೆರವಣಿಗೆಯಲ್ಲಿ ಮಹಿಳೆಯ ಕುಂಭ, ಸುಮಂಗಲಿಯರ ಕಳಸ, ಮಂಗಳವಾದ್ಯ ಸೇರಿದಂತೆ ನಾನಾ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಜೈ ಜೈ ವಾಲ್ಮೀಕಿ ಎಂಬ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಕೆ.ಶಂಕಿನದಾಸರ, ತಾಲೂಕು ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಟಿ.ಆಂಜನೇಯ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಕೆ.ಶ್ರೀನಿವಾಸರಾವ್, ಕಗ್ಗಲ್ ವಿರೇಶ, ಡಾ.ವೆಂಕಟೇಶ ಸಿ.ಭರಮಕ್ಕನವರ್, ಹಾಲುಮಾರೋ ಈರಣ್ಣ, ಬೂದಗುಂಪಿ ಅಂಬಣ್ಣ, ರಾಮಾಂಜಿನೇಯ, ಟಿ.ವಿ.ಸುದರ್ಶನರೆಡ್ಡಿ, ಮರಿಲಿಂಗಪ್ಪ, ನೀರ್ಗಂಟಿ ವಿರೇಶ, ರಘುನಾಯಕ, ದುರುಗಪ್ಪ, ಟ್ಯಾಕ್ಸಿ ಈರಣ್ಣ, ಪಿ.ವಿರೇಶ, ಜಂತಕಲ್ ದೇವರಾಜ, ದೇವರಮನೆ ಮಂಜು, ದೊಡ್ಡಬಸಪ್ಪ, ನಾಗಪ್ಪ ಸೇರಿದಂತೆ ಕಂಪ್ಲಿ-ಕುರುಗೋಡು ಹಾಗೂ ಗ್ರಾಮೀಣ ಭಾಗದಿಂದ ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು. ಅ.002: ಕಂಪ್ಲಿಯಲ್ಲಿ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಹಾಗೂ ಶಾಸಕ ಜೆ.ಎನ್.ಗಣೇಶ್ ಅವರ ಸಮ್ಮುಖದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.