ಬೈಲಹೊಂಗಲ

ಯಾವುದೇ ಆತಂಕಕ್ಕೆ ಒಳಗಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ; ದೊಡಗೌಡ್ರ

ಯಾವುದೇ ಆತಂಕಕ್ಕೆ ಒಳಗಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ;  ದೊಡಗೌಡ್ರ

ಬೈಲಹೊಂಗಲ 31: ಕೋವಿಡ್ ಲಸಿಕೆ ಯಾವುದೇ ಅಡ್ಡ ಪರಿಣಾಮ ಬೀರದು. ಈ ಕುರಿತು ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಲಸಿಕೆ ಪಡೆಯಬಹುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ಮಂಗಳವಾರ ಕೋವಿಡ್ ಲಸಿಕೆ ಪಡೆದರು. 

ಕೋವಿಡ್ ಮಹಾಮಾರಿ ಇಂದು ನಮ್ಮನ್ನು ಭಯಂಕರವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಎರಡನೇ ಅಲೆಯ ಸುಳಿವು ಸಿಕ್ಕ ಈ ಸಂದರ್ಭದಲ್ಲಿ ಕೋವಿಡ್  ಲಸಿಕೆ ಪಡೆಯುವುದು ಅವಶ್ಯ ಎಂದು ಶಾಸಕರು ನಾಗರಿಕರಿಗೆ ಮನವಿ ಮಾಡಿದರು.

ಹಿರಿಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಸುದ್ದಿ ಓದಿ