ಸೌಂದತ್ತಿ

ರುದ್ರಾಭಿಷೇಕದ ಮಹಾಮಂಗಲೋತ್ಸವ: ಮಹಾಪ್ರಸಾದ

ರುದ್ರಾಭಿಷೇಕದ ಮಹಾಮಂಗಲೋತ್ಸವ: ಮಹಾಪ್ರಸಾದ

ಸವದತ್ತಿ 29: ಶ್ರಾವಣ ಮಾಸದಲ್ಲಿ ಮಠ ಮಾನ್ಯಗಳು ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಂತಹ ಕಾರ್ಯಕ್ರಮಗಳು ಮಾನವನಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಸಾಧ್ಯ ಎಂದು ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗಿರಿಜನ್ನವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ರುದ್ರಾಭಿಷೇಕದ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಪ್ರಸಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿನ ದೇವಸ್ಥಾನ ಮತ್ತು ಮಠ ಮಾನ್ಯಗಳಲ್ಲಿ ಇಂದು ನಡೆಯುತ್ತಿರುವ ಅನ್ನದಾಸೋಹಗಳು ಶ್ರೇಷ್ಠತೆಗೆ ಸಾಕ್ಷಿಯಾಗಿವೆ ಎಂದರು. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಎಲ್ಲ ಸಮಾಜದ ಜನರಿಗೆ ಮಾದರಿಯಾಗಿ ಪರಿಣಮಿಸುತ್ತಿವೆ ಎಂದರು.

ರಾಮಲಿಂಗೇಶ್ವರ ಅರ್ಬನ ಸೌಹಾರ್ದ ಸಹಕಾರಿ ಅಧ್ಯಕ್ಷ ಪುಂಡಲೀಕ ಬಾಳೋಜಿ ಮಾತನಾಡಿ, ಪ್ರತಿಯೊಂದು ದೇವಸ್ಥಾನಗಳು ಸಮಾಜದಲ್ಲಿ ಶಾಂತಿಯನ್ನು ನೆಲೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಧಾರ್ಮಿಕತೆಯತ್ತ ನಾವು ಸಾಗಬೇಕಿದೆ ಎಂದರು. 

ದೇವಸ್ಥಾನದಲ್ಲಿ ಶ್ರಾವಣ ಮಾಸ ಪೂರ್ತಿ ಹಮ್ಮಿಕೊಂಡ ರುದ್ರಾಭಿಷೇಕದ ಕೊನೆಯ ದಿನ ದೇವರಿಗೆ ರುದ್ರಾಭಿಷೇಕ, ಪುಷ್ಪಾಲಂಕಾರದೊಂದಿಗೆ ಶ್ರೀಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.

ಗದಗಯ್ಯ ಚಿಕ್ಕಮಠ ಇವರ ವೈದಿಕತ್ವದಲ್ಲಿ ತಿಂಗಳಾದ್ಯಂತ ರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಶ್ರೀನಿವಾಸ ಗದಗ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು.

ಮರಾಠ ಸಮಾಜದ ಹಿರಿಯರದಾದ ಸಣ್ಣಯಲ್ಲಪ್ಪ ಗಿರಿಜನ್ನವರ, ರಾವ್ಸಾಹೇಬ ಜಾಮದಾರ, ಸುಭಾಸ ಪವಾರ, ತಾನಾಜಿ ಶಿಂಧೆ, ಧರ್ಮರಾಜ ಗಿರಿಜನ್ನವರ, ಕೇದಾರ ಮೊಖಾಶಿ, ರವಿ ಗಿರಿಜನ್ನವರ, ಅಣ್ಣಪ್ಪ ಪವಾರ, ವಿ.ಜೆ.ಪವಾರ, ಮಂಜುನಾಥ ಡಬಕೆ, ಮಂಜುನಾಥ ನಿಕ್ಕಮ್, ಮಲ್ಲೇಶ ರಾಜನಾಳ, ಅಂದುಸಿಂಗ್ ರಜಪುತ, ಅಶೋಕ ಶಿಂಧೆ, ಮಾರುತಿ ಜಾಧವ, ಲಕ್ಷ್ಮಣ ಕಿಟದಾಳ, ಅಣ್ಣಪ್ಪ ಪಂತರ, ವಿಠ್ಠಲ ಜಾಮದಾರ, ಭೀಮಶಿ ನಲವಡೆ, ಗಿರೀಶ ಶಿಂಧೆ, ಪುಂಡಲೀಕ ಪಡವಳಕರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ