ಅಥಣಿ

ಗಡಿ ವಿಚಾರದಲ್ಲಿ ಮಹಾಜನ ವರದಿ ಅಂತಿಮ : ಪುಂಡಾಟಿಕೆಗೆ ಯಾವುದೇ ಅರ್ಥವಿಲ್ಲ ಮುಖಂಡ ದೇಶಪಾಂಡೆ

ಗಡಿ ವಿಚಾರದಲ್ಲಿ ಮಹಾಜನ ವರದಿ ಅಂತಿಮ : ಪುಂಡಾಟಿಕೆಗೆ ಯಾವುದೇ ಅರ್ಥವಿಲ್ಲ ಮುಖಂಡ ದೇಶಪಾಂಡೆ
ಅಥಣಿಯಲ್ಲಿ ಕರವೇ ಘಟಕದಿಂದ ಹಮ್ಮಿಕೊಂಡಿದ್ದ ಗಡಿನಾಡು ಕನ್ನಡೋತ್ಸವದಲ್ಲಿ ಸಾಧಕರಿಗೆ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶ

ಅಥಣಿ: ಕನ್ನಡಿಗರು ಮತ್ತು ಮರಾಠಿಗರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಗಡಿ ಖ್ಯಾತಿ ತೆಗೆದು ಪುಂಡಾಟಿಕೆ ನಡೆಸುವುದು ಸರಿಯಲ್ಲ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ವರದಿ ಅಂತಿಮವಾಗಿದೆ. ಮರಾಠಿಗರು ಈ ವಿಚಾರದಲ್ಲಿ ಮೇಲಿಂದ ಮೇಲೆ ಪುಂಡಾಟಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಅರವಿಂದರಾವ್ ದೇಶಪಾಂಡೆ ಹೇಳಿದರು. 

ಡಾ. ಆರ್ ಎಚ್ ಕುಲಕರ್ಣಿ  ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಆಯೋಜಿಸಲಾಗಿದ್ದ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಗಡಿ ಭಾಗದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಬೇಕಾಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಉಳಿದರೆ ಕನ್ನಡಿಗ ಉಳಿಯುತ್ತಾನೆ. ಗಡಿನಾಡಿನ ಕನ್ನಡ ಶಾಲೆಗಳು ಪುನಶ್ಚೇತನಗೊಳ್ಳಬೇಕು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಕಬೇಕು. ಕನ್ನಡ ಕಲಿತವರಿಗೆ ಯಾವ ನೌಕರಿ ಸಿಗಲ್ಲ ಎನ್ನುವ ಮನೋಭಾವ ದೂರವಾಗಬೇಕು. ಸರ್ಕಾರ  ಕೂಡ ಕನ್ನಡ ಕಲಿತವರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

 ಕನ್ನಡ ಭಾಷೆ ಆಡಳಿತಾತ್ಮಕವಾಗಿ ಮತ್ತು ಎಲ್ಲೆಡೆ ನಾಮಫಲಕಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ಹೇಳಿದ ಅವರು ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ ಹೋರಾಟ ಮಾಡುವ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗಡಿ ಭಾಗದಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡಿಗರನ್ನ ಮತ್ತು ಸಕರ್ಾರಗಳನ್ನು ಜಾಗ್ರತೆಗೊಳಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದಶರ್ಿ ರವಿ ಪೂಜಾರಿ ಮಾತನಾಡಿ ಗಡಿ ಭಾಗದ ಪ್ರದೇಶದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಹೋದರತ್ವದಿಂದ ಜೀವನ ನಡೆಸುತ್ತಿದ್ದರೂ ಎಂ ಇ ಎಸ್ ಮತ್ತು ಶಿವಸೇನೆಯ ಕೆಲವು ಪುಂಡರು ತಮ್ಮ ರಾಜಕೀಯ ಲಾಭಕ್ಕಾಗಿ ಪುಂಡಾಟಿಕೆಯನ್ನು ನಡೆಸಿದ್ದಾರೆ. 

ಕನ್ನಡಿಗರಲ್ಲಿ ಮತ್ತು ಮರಾಠಿಗರಲ್ಲಿ ದ್ವೇಷದ ಭಾವನೆ ಬಿತ್ತುತ್ತಿದ್ದಾರೆ. ಇಂತಹ ಸಂಘಟನೆಗಳನ್ನು ಸರ್ಕಾರ ಗಳು ನಿಷೇಧಿಸಬೇಕು. ರಾಜಕೀಯ ಲಾಭಕ್ಕಾಗಿ ಮೇಲಿಂದ ಮೇಲೆ ಪುಂಡಾಟಿಕೆ ಮಾಡುವವರನ್ನು ಓಲೈಸುವ ಮನೋಭಾವ ಬಿಡಬೇಕು. ಗಡಿ ವಿಚಾರದಲ್ಲಿ ನಮ್ಮ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ವಾಭಿಮಾನದಿಂದ ನಮ್ಮ ನಾಡು ನುಡಿ, ನೆಲ, ಜಲ, ಕಲೆ ಸಂಸ್ಕೃತಿಯ ರಕ್ಷಣೆಕ್ಕಾಗಿ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಹೇಳಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದ ಕನ್ನಡಿಗರ ಸ್ವಾಭಿಮಾನದ ಸಂಘಟನೆಯಾಗಿ ಪ್ರವೀಣ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನ ಮತ್ತು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ಹೇಳಿದರು. ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. 

ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನ ಒಗ್ಗೂಡಿಸಿ ಕನರ್ಾಟಕ ಎಂದು ಹೆಸರು ನೀಡುವ ಮೂಲಕ ಪ್ರತಿ ವರ್ಷ ನಾವು ನವೆಂಬರ್ ತಿಂಗಳಲ್ಲಿ ಕನ್ನಡದ ಹಬ್ಬವನ್ನು ಆಚರಿಸುತ್ತೇವೆ. ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆ ಮತ್ತು ಭಾಷಿಗರ ಪ್ರಭಾವದಿಂದ ಕನ್ನಡ ಭಾಷೆ ಮತ್ತು ಕನ್ನಡಿಗರ ಸ್ಥಿತಿ ಕುಂದುವಂತಾಗಿದೆ. ಕರ್ನಾಟಕ ದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಎನ್ನುವಂತಹ ಘೋಷಣೆಗಳನ್ನು ಕೂಗುವ ಪರಿಸ್ಥಿತಿ ನಮ್ಮದಾಗಿದೆ. ಕನ್ನಡಕ್ಕಾಗಿ ಕೇವಲ ಕನ್ನಡ ಪರ ಸಂಘಟನೆಗಳು ಹೋರಾಡಿದರೆ ಸಾಲದು, ಪ್ರತಿಯೊಬ್ಬ ಕನ್ನಡಿಗನು ಸ್ವಾಭಿಮಾನದಿಂದ ನಾಡು ನುಡಿ ಕಲೆ ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಅನೇಕ ಹೋರಾಟಗಾರರು, ಸಾಹಿತಿಗಳು, ಅನೇಕ ಸಂಘಟನೆಗಳು ಶ್ರಮಿಸುತ್ತಿವೆ. ಕನ್ನಡ ಶಾಲೆಗಳಲ್ಲಿ ಸರ್ಕಾರ ದ ಅನೇಕ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಗುಣಾತ್ಮಕ ಶಿಕ್ಷಣವನ್ನ ನೀಡಲಾಗುತ್ತಿದೆ. 

ಸಕರ್ಾರಿ ಶಾಲೆಯ ಮಕ್ಕಳಿಗೂ ಕೂಡ ನವೋದಯ ಮತ್ತು ಮುರಾಜರ್ಿ ವಸತಿ ಶಾಲೆಯ ಪ್ರವೇಶಾತಿಗಳು ದೊರಕಬೇಕು ಎಂಬ ಉದ್ದೇಶದಿಂದ ಅಥಣಿ ವಲಯದ ಎಲ್ಲಾ ಶಾಲೆಗಳಲ್ಲಿ ತರಬೇತಿ ಕಾರ್ಯಕಾರಿಗಳನ್ನ ನಡೆಸಲಾಗುತ್ತಿದೆ ಎಂದು ಹೇಳಿದ ಅವರು ಕರವೇ ಸಂಘಟನೆಯ ಮೂಲಕ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ  ನಡೆಸಿ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿರುವದು ಮತ್ತು ಕನ್ನಡಪರ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆಯ ಮೂಲಕ ಇನ್ನಷ್ಟು ಕನ್ನಡ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು. 

ಈ ವೇಳೆ ಸಮಾಜ ಸೇವಕ ಮಹಾವೀರ ಪಡನಾಡ, ( ಸಂಕೋನಟ್ಟಿ ), ರಂಗಭೂಮಿ ಕಲಾವಿದ ಶಿವಪ್ಪ ಕುಂಬಾರ( ಚಮಕೇರಿ ), ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ (ಅಥಣಿ ), ಚಿತ್ರ ಕಲಾವಿದ ಮುರುಗೇಶ ಅರಟಾಳ ( ಅಥಣಿ ), ಸಾಹಿತಿ ಡಾ. ಅರ್ಚನಾ ಅಥಣಿ ( ಅಥಣಿ ), ರೈತಪರ ಹೋರಾಟಗಾರ ಮಹಾದೇವ ಮಡಿವಾಳ(ಹಲ್ಯಾಳ ), ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ( ಅಥಣಿ ), ಮತ್ತು ಗಡಿನಾಡಿನ ಅತ್ಯುತ್ತಮ ಕನ್ನಡ ಶಾಲೆ, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, (ತೇವರಟ್ಟಿ ) ಇವರಿಗೆ 2022 ಸಾಲಿನ " ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಲಾಯಿತು. 

ನಂತರ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಕರವೇ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪಧರ್ೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಂತರ ಕಲಾವಿದ ವಿಜಯ ಹುದ್ದಾರ ಹಾಗೂ ಸಂಗಡಿಗರಿಂದ ಕನ್ನಡ ರಸಮಂಜರಿ ಕಾರ್ಯಕ್ರಮ ಜರುಗಿತು. ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರಳು ಸಿದ್ದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ಕೆ ಎಲ್ ಕುಂದರಗಿ, ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ ಬಾಮನೆ, ತಾಲೂಕಾ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಮಹಿಳಾ ಘಟಕದ ಅಧ್ಯಕ್ಷ ವಿದ್ಯಾ ಮರಡಿ, ಶಂಕರ ಮಗದುಮ, ಕುಮಾರ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಣ್ಣಾಸಾಬ ತೆಲಸಂಗ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉದಯ ಮಕಾಣಿ, ಸಿದ್ದು ಹಂಡಗಿ ಕಾರ್ಯಕ್ರಮ ನಿರೂಪಿಸಿದರು. ರಾಜು ವಾಘಮೋರೆ ವಂದಿಸಿದರು.



ಸುದ್ದಿ ಓದಿ