ರಾಷ್ಟ್ರೀಯ

ಪುಂಡರು, ಮಾಫಿಯಾಗಳಿಗೆ ಭಯವಿಲ್ಲ: ಮಾಯಾವತಿ ವಾಗ್ದಾಳಿ

ಪುಂಡರು, ಮಾಫಿಯಾಗಳಿಗೆ  ಭಯವಿಲ್ಲ: ಮಾಯಾವತಿ  ವಾಗ್ದಾಳಿ

ನವದೆಹಲಿ, ಅಕ್ಟೋಬರ್ 1 :  ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ಪಿ ನಾಯಕಿ ಮಾಯಾವತಿ ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ. 

'ಹತ್ರಾಸ್ ಮತ್ತು ಬಲರಾಂಪುರ್ ಘಟನೆಯನ್ನು ನೋಡಿದರೆ  ಯುಪಿಯಲ್ಲಿ ಯಾವುದೇ ಕಾನೂನು-  ನಿಯಮಗಳಿಲ್ಲ  ಪುಂಡರು, ಮಾಫಿಯಾಗಳಿಗೆ ರಾಜ್ಯದಲ್ಲಿ    ಭಯ, ಅಂಜಿಕೆಯೂ ಇಲ್ಲ ಎಂದು ಮಾಯಾ ಕಿಡಿಕಾರಿದರು .  

ಹತ್ರಾಸ್ ಘಟನೆಯ ನಂತರ, ಮಹಿಳೆಯರ ವಿರುದ್ಧ ಅಪರಾಧಗಳನ್ನು ಮಾಡುವ ಜನರ ವಿರುದ್ಧ ಯುಪಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೆ  ಆದರೆ ಬಲರಾಂಪುರದ ದಲಿತ ವಿದ್ಯಾರ್ಥಿಯ ವಿರುದ್ಧ ಇದೇ ರೀತಿಯ ದೌರ್ಜನ್ಯ ಎಸಗಿರುವುದನ್ನು  ನೋಡಿದರೆ ಯುಪಿ ಸರ್ಕಾರದಲ್ಲಿ  ಅಪರಾಧಿಗಳು, ಮಾಫಿಯಾಗಳು ಮತ್ತು ಅತ್ಯಾಚಾರಿಗಳು ಯಾವ ಭಯವಿಲ್ಲದೆ ರಾಜರೋಷವಾಗಿ ಅಲೆದಾಡುತ್ತಿದ್ದಾರೆ ಎಂಬುದು ಬಟ್ಟಂಬಯಲಾಗಿದೆ ಎಂದು ಮಾಯಾವತಿ ದೂರಿದರು. 

ಸುದ್ದಿ ಓದಿ