ರಾಯರ ಮಠಗಳಲ್ಲಿ ವೈಭವದಿಂದ ನಡೆದ ರಾಯರ ಮಧ್ಯಾರಾಧನೆ
ಹೊಸಪೇಟೆ 14: ನಗರದ ವಿವಿಧ ರಾಯರ ಮಠಗಳಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ವರ್ಷದ ಮಧ್ಯಾರಾಧನೆ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಶನಿವಾರ ನಡೆಯಿತು.
ಗಾಂಧಿ ಕಾಲೊನಿ: ಸ್ಥಳೀಯ ಗಾಂಧಿ ಕಾಲೋನಿ ನಂಜನಗೂಡು ಶ್ರೀರಾಯರ ಮಠದಲ್ಲಿ ಬೆಳಿಗ್ಗೆ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷವಾಗಿ ಅಷ್ಟೋತ್ತರ ಸಹಿತ ಫಲ ಪಂಚಾಮೃತಾಭಿಷೇಕ, ವಿವಿಧ ಬಗೆಯ ಹೂವಿನ ಅಲಂಕಾರ, ರಜತ, ರೇಷ್ಮೆ ಅಲಂಕಾರ ನೆರವೇರಿಸಲಾಯಿತು. ನಂತರ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಠದ ವಿಚಾರಣಕರ್ತರಾದ ರಂಗನಗೌಡ್ರು, ವ್ಯವಸ್ಥಾಪಕ ಕೃಷ್ಣಮೂರ್ತಿ, ಕನಕವಿಡು ಮೋಹನ್ ರಾವ್, ಮಾರುತಿ ಆಚಾರ್ಯ, ಪ್ರಕಾಶ್ ಇತರರಿದ್ದರು.
ಜಗಳಿಕಟ್ಟೆ: ಸ್ಥಳೀಯ ಪೂಜಾರ ಓಣಿಯ ಜಗಳಿಕಟ್ಟೆ ಶ್ರೀರಾಘವೇಂದ್ರ ಸ್ವಾಮಿ, ಅವತಾರತ್ರಯ ಮುಖ್ಯಪ್ರಾಣದೇವರ ಸನ್ನಿಧಿ ರಾಯರ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ಪಂಚಾಮೃಭಿಷೇಕ, ಅಷ್ಟೋತ್ತರ ಪಾರಾಯಣ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ, ಸರ್ವ ಸೇವೆ, ಮಹಾಪೂಜಾ, ಭಜನೆ, ಸಂಗೀತ ಸೇವೆ ಜರುಗಿತು.
ಶ್ರಿಮಠದ ಪ್ರಮುಖರಾದ ಹೊನ್ನೂರು ಭೀಮಸೇನಾಚಾರ್ಯ, ಹೊನ್ನೂರು ಪ್ರಹ್ಲಾದ್ ಆಚಾರ್ಯ, ಹೊನ್ನೂರು ಗುರುರಾಜಾಚಾರ್ಯ, ಹೊನ್ನೂರು ಪವನಾಚಾರ್ಯ, ಅನಿಲಾಚಾರ್ಯ, ವಿ.ಎ. ದೇಸಾಯಿ, ಡಿ.ಎಸ್. ವಿಜಯಕುಮಾರ್, ಅಪ್ಪರಾವ್ಸಾನಾಬಾಳ್, ರಾಯಸಂ ಶ್ರೀನಿವಾಸ್, ದೊಡ್ಡಮನಿ ಪ್ರಕಾಶ್, ಕಿರಣ್ ರಾಘವೇಂದ್ರ ಇನ್ , ಮಠದ ರಾಘವೇಂದ್ರಾಚಾರ್ಯ, ಇಬ್ರಾಂಪುರ ಪುರುಷೋತ್ತಮ್ ಆಚಾರ್ಯ ಇತರರಿದ್ದರು.
ಕಾಶಿ ದೇವಸ್ಥಾನ: ನಗರದ ಶ್ರೀಕಾಶಿ ಆಂಜಿನೇಯ ಸ್ವಾಮಿ, ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ವಿಶೇಷವಗಿ ಫಲಪಂಚಾಮೃತಾಭಿಷೇಕ, ಅರ್ಚನೆ, ವಿವಿಧ ಬಗೆಯ ಹೂವಿನ ಅಲಂಕಾರ, ರೇಷ್ಮೆ ವಸ್ತ್ರ ಸಮರೆ್ಣ, ಭಜನೆ, ಸಂಗೀತ ಸೇವೆ ಜರುಗಿತು. ಪ್ರಮುಖರಾದ ಗೋಪಾಲಕೃಷ್ಣ ಗೌಡ, ಅಪ್ಪಣ್ಣ, ರಘುರಾಮ್, ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ ಇತರರಿದ್ದರು.
ರಾಣಿಪೇಟೆ: ನಗರದ ರಾಣಿಪೇಟೆ ಶ್ರೀರಾಯರ ಮಠದಲ್ಲಿ ಮಧ್ಯಾರಾಧನೆ ನಿಮಿತ್ತ ವಿವಿಧ ಧಾರ್ಮಿಕ ಪುಜಾ ಕಾರ್ಯಕ್ರಮಗಳು ನಡೆಯಿತು.
ಫಲ ಪಂಚಾಮೃತಾಭಿಷೇಕ, ಅರ್ಚನೆ, ಅಲಂಕಾರ, ಕನಕಾಭಿಷೇಕ ಸೇವೆ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ನೆರವೇರಿಸಲಾಯಿತು. ವಿಚಾರಣಕರ್ತ ಗುರುರಾಜ ದಿಗ್ಗಾವಿ, ವ್ಯವಸ್ಥಾಪಕ ಪ್ರಹ್ಲಾದ್ ಇತರರಿದ್ದರು.