ಭಾಜಪ ಮುಖಂಡರಿಗೆ ಮಾದಿಗ ಸಮಾಜದವತಿಯಿಂದ ಸನ್ಮಾನ
ಶಿಗ್ಗಾವಿ,31 : ಪಟ್ಟಣದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರ ಕಾರ್ಯಾಲಯದಲ್ಲಿ ನೂತನವಾಗಿ ಬಿಜೆಪಿ ಶಿಗ್ಗಾಂವ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ ಹರವಿ ಹಾಗೂ ಮಾಜಿ ಅಧ್ಯಕ್ಷ ಶಿವಾನಂದ ಮ್ಯಾಗೇರಿಯವರಿಗೆ ಮಾದಿಗ ಸಮಾಜದವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡ ಕರೆಪ್ಪ ಕಟ್ಟಿಮನಿ,ಮಾಜಿ ಜಿ.ಪಂ ಅಧ್ಯಕ್ಷ ಡಾ.ಮಲ್ಲೇಶಪ್ಪ ಹರಿಜನ, ಎಸ್ಸಿ ಮೋರ್ಚಾ ತಾಲೂಕ ಅಧ್ಯಕ್ಷ ಹನಮಂತಪ್ಪ. ಹರಿಜನ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ಮುಡೆಣ್ಣವರ, ಎಸ್ಸಿ ಮೋರ್ಚಾ ಉಪಾಧ್ಯಕ್ಷಡಿಂಜ ಬಸವರಾಜ ಹರಿಜನ, ಯಲ್ಲಪ್ಪ ದೊಡ್ಡಮನಿ, ಎಸ್ಸಿ ಮೋರ್ಚಾ ಸದಸ್ಯ ಪರಶರಾಮ ಹರಿಜನ, ಬಿಜೆಪಿ ಮುಖಂಡರುಗಳಾದ ಹನಮಂತಪ್ಪ ಗಲಗಿನಕಟ್ಟಿ, ದೇವೇಂದ್ರ್ಪ ಜಾಧವ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.