ರಾಷ್ಟ್ರೀಯ

ಷೇರುಪೇಟೆ ಸೂಚ್ಯಂಕ: ಆರಂಭಿಕ ವಹಿವಾಟಿನಲ್ಲಿ 221 ಅಂಕ ಏರಿಕೆ

ಷೇರುಪೇಟೆ ಸೂಚ್ಯಂಕ:  ಆರಂಭಿಕ  ವಹಿವಾಟಿನಲ್ಲಿ  221 ಅಂಕ ಏರಿಕೆ

ಮುಂಬೈ, ಅ 23 :ಮುಂಬಯಿ  ಷೇರುಪೇಟೆ  ಸೂಚ್ಯಂಕ ಸೆನ್ಸೆಕ್ಸ್  ಶುಕ್ರವಾರದಂದು ಆರಂಭಿಕ  ವಹಿವಾಟಿನಲ್ಲಿ  221.83 ಪಾಯಿಂಟ್ ಗಳ ಏರಿಕೆಯೊಂದಿಗೆ 40,780.32 ಪಾಯಿಂಟ್ ನಲ್ಲಿ ವಹಿವಾಟು ನಡೆಸುತ್ತಿದೆ.  ನಿಫ್ಟಿ ಸೂಚ್ಯಂಕವು 70. ಅಂಕಗಳ  ಏರಿಕೆ ದಾಖಲಿಸಿ, 11,966.80 ಅಂಶಗಳೊಂದಿಗೆ ವ್ಯವಹಾರ ಆರಂಭಿಸಿದೆ. ಐಸಿಐಸಿಐ ಬ್ಯಾಂಕ್, ಸಿಪ್ಲಾ, ಭಾರ್ತಿ ಏರ್ ಟೆಲ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ,  ಇನ್ನು ಗೇಲ್, ಹಿಂದೂಸ್ತಾನ್ ಯುನಿಲಿವರ್, ಶ್ರೀ ಸಿಮೆಂಟ್ಸ್ ಹಾಗೂ ಬಜಾಜ್ ಆಟೋ ಕಂಪೆನಿ ಷೇರುಗಳು ಇಳಿಕೆ ದಾಖಲಿಸಿ, ವಹಿವಾಟು ನಡೆಸುತ್ತಿವೆ.ಜಾಗತಿಕ ಅಂಶಗಳ ಪ್ರಭಾವ, ಕೊರೊನಾ ಲಸಿಕೆ ಬೆಳವಣಿಗೆ, ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆ ಇತ್ಯಾದಿ ಅಂಶಗಳು ಷೇರು ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.


ಸುದ್ದಿ ಓದಿ