ಶಿಗ್ಗಾವ್

ಎಮ್‌.ಪಿ.ಎಮ್ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯುತ್ತಿದೆ: ದುಂಡಿಗೌಡ್ರ

ಎಮ್‌.ಪಿ.ಎಮ್ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯುತ್ತಿದೆ: ದುಂಡಿಗೌಡ್ರ

ಶಿಗ್ಗಾವಿ 16:  ಸ್ನೇಹಿತರ ದೂರದೃಷ್ಠಿಯ ಫಲವಾಗಿ ನಿರ್ಮಾಣಗೊಂಡ ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆ ಮತ್ತುಅದರಅಡಿಯಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಕೃತಿ ಪ್ರಾಥಮಿಕ ಶಾಲೆಯು ವ್ಯಾಪಾರೀಕರಣ ಮನೋಭಾವದಿಂದದೂರ ಉಳಿದು, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಸೃಷ್ಟಿಸಬೇಕೆಂಬ ಹೆಬ್ಬಯಕೆಯ ನಿಸ್ವಾರ್ತ ಸೇವೆಯಿಂದ ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯುತ್ತಿದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.  

ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಮರ ಅಪ್ಪುವಿಗೆ ನೃತ್ಯ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ನಾನು ನೋಡಿರುವ ಅತ್ಯುತ್ತಮ ಶಾಲೆಗಳಲ್ಲಿ ಇದು ಒಂದಾಗಿದ್ದು, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ತಾಯಂದಿರಿಗೆಇದ್ದು, ಮಕ್ಕಳ ಕಲಿಕೆಯ ವಿಷಯದಲ್ಲಿ ಮನೆಯಲ್ಲಿ ಬಹಳಷ್ಟು ಜವಾದ್ಭಾರಿಯಿಂದ ನಡೆದುಕೊಳ್ಳಬೇಕು, ಕೆಲಸದಒತ್ತಡದಲ್ಲಿತಂದೆಯಂದಿರು ಮಕ್ಕಳೊಂದಿಗೆ ಕಾಲ ಕಳೆಯುತ್ತಿಲ್ಲಾ, ಇದರಿಂದತಂದೆಯಂದಿರು ಮಕ್ಕಳ ಮನಸ್ಸಿನಿಂದ ದೂರವಾಗುತ್ತಿದ್ದಾರೆ, ತಂದೆ,ತಾಯಿ ಮತ್ತು ಮಕ್ಕಳ ಮಧ್ಯದ ವಾತ್ಸಲ್ಯದ ವಿನಿಮಯದಲ್ಲಿ ಮೊಬೈಲ್ ಶತ್ರುವಾಗಿ ಒಳಗೆ ಬರುತ್ತಿದೆ, ಎಚ್ಚರಿಕೆಯಿಂದ ಅದನ್ನು ಬಳಸಿ ಎಂದು ಹೇಳಿದರು. 

ವಿರಕ್ತ ಮಠದ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ತಂದೆ ತಾಯಿಗಳೊಂದಿಗೆ ಇದ್ದು ಸ್ಥಳೀಯವಾಗಿ ಶಿಕ್ಷಣ ಪಡೆಯುವ ಮಕ್ಕಳು ನನ್ನಕುಟುಂಬ, ನನ್ನಊರು, ನನ್ನಜನಾ ಎಂಬ ಮನೋಭಾವನೆಯಲ್ಲಿ ಬೆಳೆಯುತ್ತಾರೆ ಎಂಬುವುದಕ್ಕೆ ಈ ವೇದಿಕೆಯಮೇಲೆ ಕುಳಿತವರು, ಮತ್ತು ಈ ವೇದಿಕೆಯನ್ನು ಕಲ್ಪಿಸಿಕೊಟ್ಟ ಸಂಸ್ಥೆಯ ಸಂಸ್ಥಾಪಕ ಸದಸ್ಯರು ಸಾಕ್ಷಿಯಾಗಿದ್ದು, ಇಂದಿನ ಮಕ್ಕಳನ್ನು ಸಾಮಾಜಿಕ ಕಳಕಳಿ ಹೊಂದುವಂತೆ ಬೆಳಸುವ ಜವಾದ್ಭಾರಿಯನ್ನು ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಉಪಾಧ್ಯಕ್ಷ ಮಂಜುನಾಥ ಮೊರಬದ, ಮಾಜಿ ಎ.ಪಿ.ಎಂ.ಸಿ.ಅಧ್ಯಕ್ಷತಿಪ್ಪಣ್ಣಾ ಸಾತಣ್ಣವರ, ಮಾಜಿತಾ.ಪಂ ಸದಸ್ಯಕಿರಣಓರಾದಿ, ರಾಜ್ಯ ಪ್ರಶಸ್ತಿ ಪುರಸೃತ ನಿವೃತ್ತ ಶಿಕ್ಷಕ ಪಿ.ಎಸ್‌. ಯಲಿಗಾರ, ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ಶಿಕ್ಷಣ ಸಂಯೋಜಕಎಸ್‌.ಆರ್‌. ಉಮೇಶ,ಮಾಲತೇಶ ಮೊರಬದ, ಶ್ರೀನಿವಾಸ ಬಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ, ಶಾಲೆಯ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ