ಕುಷ್ಟಗಿ

ಭಾಗ್ಯ ಕಲ್ಪಿಸಿದ ದೊಡ್ಡಮನಿ ಕುಟುಂಬಕ್ಕೆ ಧನ್ಯವಾದಗಳು: ಸಂಸದ ಸಂಗಣ್ಣ ಕರಡಿ

ಭಾಗ್ಯ ಕಲ್ಪಿಸಿದ ದೊಡ್ಡಮನಿ ಕುಟುಂಬಕ್ಕೆ ಧನ್ಯವಾದಗಳು: ಸಂಸದ ಸಂಗಣ್ಣ ಕರಡಿ

ಕುಷ್ಟಗಿ 13: ದೀನ ದಲಿತ ಬಡವರ ಕಲ್ಯಾಣಕ್ಕಾಗಿ ರಹೇಮಾನ್ ಸಾಬ್ ದೊಡ್ಡಮನಿ ಅವರ ಕುಟುಂಬ ವರ್ಗದವರು ನಿರ್ಮಿಸಿರುವ ಭವ್ಯವಾದ ಅಟಲ್ ಜೀ ಸಭಾ ಭವನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಲಹೆ ನೀಡಿದರು.  

ಪ್ರಥಮದರ್ಜೆ ಗುತ್ತಿಗೆದಾರರ ರೇಹಮಾನಸಾಬ ದೊಡ್ಡಮನಿ ಅವರು ಏರಿ​‍್ಡಸಿದ್ದ ತಾಲೂಕಿನ ಹಿರೇಬನ್ನಿಗೋಳ ಕ್ರಾಸ್ ನಲ್ಲಿ ನಿರ್ಮಿಸಿರುವ  ಡಾ. ಎಪಿಜೆ ಅಬ್ದುಲ್ ಕಲಾಂ ನೂತನ ಶಾಲಾ ಕಟ್ಟಡ ಹಾಗೂ ಅಟಲ್ ಜೀ ಸಭಾ ಭವನವನ್ನು  ಉದ್ಘಾಟಿಸಿ ಮಾತನಾಡಿದ ಅವರು ಅಜಾತಶತ್ರು ದೇಶದ ಇಬ್ಬರು ಮಹಾನ್ ವ್ಯಕ್ತಿಗಳ ಇಬ್ಬರ ಹೆಸರಿನಲ್ಲಿ ಹಿರೇಬನ್ನಿಗೋಳ ಗ್ರಾಮದಲ್ಲಿ ನಿರ್ಮಿಸಿದ ಶಾಲಾ ಕಟ್ಟಡ ಹಾಗೂ ಸಭಾಭವನದ ಒಂದು ಉದ್ಘಾಟನೆಗೆ ಅವಕಾಶ ಕಲ್ಪಿಸಿದ ದೊಡ್ಡಮನಿ ಕುಟುಂಬದವರಿಗೂ  ವಂದನೆಗಳನ್ನು ಸಲ್ಲಿಸಿದರು.  

ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀ ಕರಿಬಸ ಶಿವಚಾರ್ಯ ಮಹಾಸ್ವಾಮಿಗಳು ನಿಡಶೇಸಿ ಹಿರೇಮಠ ಸಂಸ್ಥಾನದ ಚನ್ನಬಸ ಶಿವಾಚಾರ್ಯ ಮಹಾಸ್ವಾಮಿಗಳು, ವೀರಸಂಗಮೇರ್ಶವರ ಶಿವಾಚಾರ್ಯ ಮಹಾಸ್ವಾಮಿಗಳು ಚಳಗೇರಿ, ಶ್ರೀಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಯಲಬುರ್ಗಾ,  ಶ್ರೀನೀಲಕಂಠಯ್ಯ ತಾತಾನವರು ಸುಕ್ಷೇತ್ರ ಎಂ ಗುಡದೂರು, ಹಜರತ್ ಸೈಯದ್ ಶಾ ಅಬ್ದುಲ್ ಖಾದ್ರಿ  ಫೈಸಲ್ ಪಾಷಾ ಹನಮಸಾಗರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದರು.  

 ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ  ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಕೆ ಶರಣಪ್ಪ ವಕೀಲರು, ಹಸನಸಾಬ ದೋಟಿಹಾಳ, ಕುಷ್ಟಗಿ ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ, ಹಿರೇಬನಿಗೋಳ ಗ್ರಾಪಂ ಅಧ್ಯಕ್ಷೆ  ಲಕ್ಷೀಬಾಯಿ ಅಳ್ಳಳ್ಳಿ, ಕುಷ್ಟಗಿ ತಹಸೀಲ್ದಾರ ಎಂ ಸಿದ್ದೇಶ, ಕೊಪ್ಪಳ ಜಿಪಂ ಯೋಜನಾ ನಿರ್ದೇಶಕರಾದ ಟಿ. ಕೃಷ್ಣಾಮೂರ್ತಿ, ಕುಷ್ಟಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಯರಾಂ ಚವ್ಹಾಣ್, ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಡಾ. ಎಪಿಜೆ ಅಬ್ದುಲ್ ಕಲಾಂ ಶಾಲಾ ಕಟ್ಟಡ ಹಾಗೂ ಅಟಲ್ ಜೀ ಸಭಾ ಭವನದ ಅಧ್ಯಕ್ಷೆರು ಇಮಾಂಬಿ ರೇಹಮಾನಸಾಬ ದೊಡ್ಡಮನಿ ಸೇರಿದಂತೆ ಇನ್ನಿತರರು ಪಾಲ್ಗೋಂಡಿದ್ದರು.  

ಇದೇ ಸಂದರ್ಭದಲ್ಲಿ ಜಿಲ್ಲೆಯ 5 ಜೋಡಿಗಳ ಸಾಮೂಹಿಕ ವಿವಾಹ ನಡೆಸಿಕೊಟ್ಟರು. 


ಸುದ್ದಿ ಓದಿ