ಬೆಳಗಾವಿ

ಕಪ್ಪಲಗುದಿಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಸನ್ಮಾನ

ಕಪ್ಪಲಗುದಿಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಸನ್ಮಾನ

ಕಪ್ಪಲಗುದ್ದಿ  21:  ಗ್ರಾಮದ ಭಕ್ತ ಕನಕದಾಸ ಮಂಡಳಿ ವತಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.  ಆಗಸ್ಟ್‌ 20ರಂದು ಕಪ್ಪಲಗುಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ವಿವಿಧ ಕಾಮಗಾರಿಗಳ ಪೂಜಾ ಸಮಾರಂಭ ನೆರವೇರಿಸಿದರು. ಬಳಿಕ ಭಕ್ತ ಕನಕದಾಸರ ಮೂರ್ತಿಗೆ ಹೋಮ-ಹವನ ನೆರವೇರಿಸಿ ಗೌರವ ಸಲ್ಲಿಸಿದರು.  ಈ ಸಂದರ್ಭದಲ್ಲಿ ಭಕ್ತ ಕನಕದಾಸ ಮಂಡಳಿ ವತಿಯಿಂದ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ನಿಡಗುಂದಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿವಪ್ಪ ದಡ್ಡಿಮನಿ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ