ಚಿಕ್ಕೋಡಿ

ಲೋಕಸಭೆ ಕ್ಷೇತ್ರದ ಹಳ್ಳಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ

ಲೋಕಸಭೆ ಕ್ಷೇತ್ರದ ಹಳ್ಳಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ

ಚಿಕ್ಕೋಡಿ 29: ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ ನಾನು, ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಜನರ ಪ್ರತಿ ಸಂಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. 

ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಬಾಗ ಮತಕ್ಷೇತ್ರದ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ, ರಾಯಬಾಗ ತಾಲೂಕಿನ ಮೇಖಳಿ, ಬಾವಚಿ, ಹುಬ್ಬರವಾಡಿ, ಬೂದಿಹಾಳ, ಭೆೆಂಡವಾಡ, ಮಂಟೂರ, ನಿಪನ್ಯಾಳ, ಕಂಕಣವಾಡಿ ಪಟ್ಟಣಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅಲಿಸಿ ಮಾತನಾಡಿದರು. 

ಈ ನಿಟ್ಟಿನಲ್ಲಿ ರಾಯಬಾಗ ಮತಕ್ಷೇತ್ರದ ಜನರಿಂದ ಹಲವಾರು ಅಹವಾಲುಗಳನ್ನು ಸ್ವೀಕರಿಸಿದ್ದು ಅದಕ್ಕೆ ಸೂಕ್ತವಾದ ಪರಿಹಾರ ಒದಗಿಸಲು ನಾನು ಪ್ರಯತ್ನಿಸುತ್ತೇನೆ ಎಂದರು. 

ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಡೆ ಹೆಜ್ಜೆ ಇಡುತ್ತಿದ್ದೇವೆ. ಇದರೊಂದಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಕೊರೋನಾ ಪರಿಸ್ಥಿತಿ ಹಾಗೂ ಇನ್ನಿತರ ಜನರ ಸಮಸ್ಯೆಗಳನ್ನು ತಿಳಿದುಕೊಂಡಿದ್ದು, ಶೀಘ್ರದಲ್ಲಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. 

ದಾನಪ್ಪ ಕೋಟಬಾಗಿ, ಮಲ್ಲಿಕಾರ್ಜುನ ಅಲ್ಲುರೆ, ಸಿದ್ಧು ಈಟಿ, ವಿರುಪಾಕ್ಷಿ ಈಟಿ, ಮಹಾದೇವ ಚೌಗಲಾ, ಪ್ರಭಾಕರ ದೊಡ್ಡನ್ನವರ, ಮಹಾಲಿಂಗ ಹಂಜಿ, ಬಾಳಾಪ್ಪಾ ಬಾಣೆ, ಬೀರಾ​‍್ಪ ಬಂಬಲವಾಡೆ, ಭೀಮಪ್ಪಾ ಬಾಣೆ, ನೀಜಾಮ ಪೆಂಡಾರಿ, ಅರುಣ ಮರಿಯೈ, ಶಿವಗೋಡಾ ಕೊಟೆಪ್ಪಗೋಳ, ಸದಾಶಿವ ಹಳಿಂಗಳೆ, ಬಸವರಾಜ ಮನಗೂಳ್ಳಿ, ಸುರೇಶ ಬೆಲ್ಲದ  ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ