ದೇಶಭಕ್ತಿ ಹಿಂದೂಗಳ ಮೂಲ ಗುಣ: ಮೋಹನ್ ಭಾಗವತ್
ನವದೆಹಲಿ, ಜ 2 : ದೇಶಭಕ್ತಿ ಹಿಂದೂಗಳ ಮೂಲ ಗುಣ, ಹುಟ್ಟುಗುಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿಯ ದೇಶಭಕ್ತಿಯು ಆತನ ಧರ್ಮದಿಂದಲೇ ಹುಟ್ಟಲಿದೆ ಎಂದೂ ಮಹಾತ್ಮ ಗಾಂಧೀಜಿ ಹೇಳಿದ್ದನ್ನು ಅವರು ಮತ್ತೆ ಸ್ಮರಿಸಿದ್ದಾರೆ. ಮಹಾತ್ವ ಗಾಂಧಿಯವರನ್ನು ಸಂಘವು ತಮ್ಮವರೆಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ ಎಂದು ಮಾತುಗಳಿಗೆ ಯಾವುದೆಆಧಾರವಿಲ್ಲ . ಅಂತಹ ಮಹಾನ್ ವ್ಯಕ್ತಿಯನ್ನು ಹಾಗೆಂದು ಬಿಂಬಿಸಲು ಯಾರಿಂದಲೂ ಸಾಧ್ಯವೂ ಇಲಲ್ಲ ಎಂದೂ ಭಾಗವತ್ ಅಭಿಪ್ರಾಯಪಟ್ಟರು. ದೇಶಭಕ್ತಿ ಹಿಂದೂಗಳ ಮೂಲ ಗುಣ. ಕೆಲವೊಮ್ಮೆ ನೀವು ಅವರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾದೀತು. ಆದರೆ ಅವರೆಂದೂ ದೇಶ ವಿರೋಧಿಯಾಗಲಾರ. ದೇಶ ಭಕ್ತಿ ಎಂದರೆ ಕೇವಲ ಭೂಮಿಯ ಮೇಲಿನ ಪ್ರೀತಿಯಲ್ಲ, ಅದು ಜನರು, ನದಿಗಳು, ಸಂಸ್ಕೃತಿ, ಸಂಪ್ರದಾಯಗಳ ಮೇಲಿನ ಅಭಿಮಾನ ಎಂದೂ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು .