ಹೊಸಪೇಟೆ

ಶಾಸಕರಿಂದ ನೂತನ ರಥ ನಿರ್ಮಾಣದ ಕಾಮಗಾರಿ ವೀಕ್ಷಣೆ

ಶಾಸಕರಿಂದ ನೂತನ ರಥ ನಿರ್ಮಾಣದ ಕಾಮಗಾರಿ ವೀಕ್ಷಣೆ

ವಿಜಯನಗರ, 17: ಪಟ್ಟಣದ ಆರಾಧ್ಯ ದೈವ ಲಕ್ಷ್ಮಿನಾರಾಯಣ ಸ್ವಾಮಿ, ಆಂಜನೇಯ ಸ್ವಾಮಿ ಉಭಯ ದೇವರುಗಳ ನೂತನ ರಥ ನಿರ್ಮಾಣದ ಕಾರ್ಯವನ್ನು ಹ.ಬೊ.ಹಳ್ಳಿ ಶಾಸಕ ನೇಮಿರಾಜ್ ನಾಯ್ಕ್‌ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ನಂತರ ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಿತಿಯವರೊಂದಿಗೆ ಚರ್ಚಿಸಿದರು.ದೇವಸ್ಥಾನದ ಮುಂಭಾಗದಲ್ಲಿನ ಗರುಡ ಗಂಭ ಸ್ಥಾಪನೆ, ಅನ್ನದಾಸೋಹ ಅಡುಗೆ ಗೃಹ ನಿರ್ಮಾಣದ ನೀಲನಕ್ಷೆ, ದೇವಸ್ಥಾನ ಮುಂಭಾಗದಲ್ಲಿ ಗ್ರಾನೈಟ್ ಹಾಕುವ ಕುರಿತು, ಕಬ್ಬಿಣದ ಬ್ಯಾರಿಕೇಡ್‌ಗಳ ಬದಲು ಸ್ಟೀಲ್ ಬ್ಯಾರಿಕೇಡ್‌ಗಳನ್ನು ಹಾಕಿ ದೇವಸ್ಥಾನದ ಪ್ರಾಂಗಣವನ್ನು ಸುಂದರಗೊಳಿಸಲು ಚರ್ಚಿಸಲಾಯಿತು. ನಂತರ  ರಥೋತ್ಸವದ ನಿರ್ಮಾಣದ ಖರ್ಚು ವೆಚ್ಚಗಳ ಕುರಿತು ಚರ್ಚಿಸಿ, ರಥ ನಿರ್ಮಾಣಕ್ಕೆ ಕಡಿಮೆಯಾಗಲಿರುವ ಹಣ ಸಂಗ್ರಹಣೆಯನ್ನು ಭಕ್ತರಿಂದ ಸಂಗ್ರಹಿಸುವ ಕುರಿತು ರೂಪುರೇಷೆಗಳನ್ನು ನಿರ್ಣಯಿಸಲಾಯಿತು. 

ದೇವಸ್ಥಾನದ ಮುಂಭಾಗದಲ್ಲಿ ರಾಜಗೋಪುರ ನಿರ್ಮಾಣದ ಕುರಿತು ಇರುವ ಗೊಂದಲಗಳ ನಿವಾರಣೆಗೆ ಅಭಿವೃದ್ಧಿ ಸಮಿತಿಯ ಅದ್ಯಕ್ಷರ ಸಮೇತ ಸರ್ವ ಸದಸ್ಯರೊಂದಿಗೆ ಮತ್ತೊಮ್ಮೆ ಸಭೆ ಸೇರಿ ಒಮ್ಮತದ ನಿರ್ಣಯ ಕೈಗೊಳ್ಳುವಂತೆ ಮುಜರಾಯಿ ಇಲಾಖೆಯ ಆಡಳಿತ ಅಧಿಕಾರಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಗೋವಿಂದರ ಪರುಶುರಾಮ, ಚಿದ್ರಿ ಸತೀಶ್, ರಘುವೀರ್, ಯು ವೆಂಕಟೇಶ್, ತಳವಾರ ದೊಡ್ಡರಾಮಣ್ಣ, , ಈ ಯರಿಸ್ವಾಮಿ, ವಿಶ್ವನಾಥ, ಸೆರೆಗಾರ್ ನವೀನ್, ಡಿ. ನರಸಿಂಹ ಮೂರ್ತಿ, ಎಲಿಗಾರ್ ಮಂಜುನಾಥ, ಚುಕ್ಕಿ ನಾಗೇಶ್, ಹಾಗೂ ಇತರರಿದ್ದರು. 


ಸುದ್ದಿ ಓದಿ