ಸೌಂದತ್ತಿ

ಸವದತ್ತಿಯಲ್ಲಿ ಶಕ್ತಿ ಯೋಜನೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ಸವದತ್ತಿಯಲ್ಲಿ ಶಕ್ತಿ ಯೋಜನೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ಸವದತ್ತಿ 11: ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿರುವಂತ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಮ್ಮ ಸರಕಾರ ಪ್ರಮುಖ ಪಾತ್ರವಹಿಸಿದ್ದು, ಇಂದು ಶಕ್ತಿ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಸ್ಥಳೀಯ ಬಸ್ಸ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಸರಕಾರ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಸವದತ್ತಿಯ ಯಲ್ಲಮ್ಮಾ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಸಂಖ್ಯಾತ ಮಹಿಳಾ ಭಕ್ತರು ಆಗಮಿಸುತ್ತಿದ್ದು, ಅವರೆಲ್ಲರಿಗೂ ಈ ಶಕ್ತಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು. 

ಗಂಗಾಧರ ಗೋರಾಬಾಳ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿನಿತ್ಯ ಸವದತ್ತಿ ಘಟಕದಿಂದ 12ಸಾವಿರಕ್ಕೂ ಹೆಚ್ಚು ಮಹಿಳೆಯರು ಸಾರಿಗೆ ಘಟಕ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿದ್ದು, ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂದರು. 

ಸಿಪಿಐ ಕರುಣೇಶಗೌಡ ಹಾಗೂ ತಾ.ಪಂ ಇಓ ಯಶವಂತಕುಮಾರ ಮಾತನಾಡಿ, ಸರಕಾರದಿಂದ ಸ್ಮಾರ್ಟಕಾರ್ಡ ವಿತರಣೆಯಾಗುವವರೆಗೆ ಮಹಿಳಾ ಪ್ರಯಾಣಿಕರು ತಮ್ಮ ಆಧಾರ ಕಾರ್ಡ ಅಥವಾ ಇನ್ನಾವುದೆ ತಮ್ಮ ಗುರುತಿನ ಚೀಟಿಯನ್ನು ಬಳಸಿ ಬಸ್ಸಿನಲಿ ಉಚಿತವಾಗಿ ಪ್ರಯಾಣ ಬೆಳೆಸಬಹುದು ಎಂದರು. ಈ ಯೋಜನೆಯ ಸದ್ಭಳಕೆಯನ್ನು ಮಾಡಿಕೊಳ್ಳಬೇಕೆಂದರು. ಸಾರಿಗೆ ಘಟಕದ ಡಿಎಮ್‌ಇ ಕೆ.ಆರ್‌.ನಾಯ್ಕರ ಅಧ್ಯಕ್ಷತೆವಹಿಸಿದ್ದರು. 

ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಉಪಾಧ್ಯಕ್ಷ ದೀಪಕ ಜಾನ್ವೇಕರ, ಬಿ.ಎನ್‌.ಪ್ರಭುನವರ, ತಹಸೀಲ್ದಾರ ಜೆ.ಬಿ.ಜಕ್ಕನಗೌಡರ, ಘಟಕ ವ್ಯವಸ್ಥಾಪಕ ವಿಠ್ಠಲ ನಡುವಿನಮನಿ, ಡಿ.ಡಿ.ಟೋಪೋಜಿ, ಕೆ.ಎಚ್‌.ಕದ್ರಾಪುರ, ಮಲ್ಲು ಜಕಾತಿ, ಡಾ.ಮಹೇಶ ಚಿತ್ತರಗಿ, ಸಂತೋಷ ನೊರೆಯವರ, ಯಲ್ಲಪ್ಪ ಗೊರವನಕೊಳ್ಳ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ