ತಾಳಿಕೋಟಿ

ನಾವದಗಿ ಗ್ರಾಮಸ್ಥರಿಂದ ಶಾಸಕ ರಾಜುಗೌಡಗೆ ಸನ್ಮಾನ

ನಾವದಗಿ ಗ್ರಾಮಸ್ಥರಿಂದ ಶಾಸಕ ರಾಜುಗೌಡಗೆ ಸನ್ಮಾನ

ತಾಳಿಕೋಟಿ07: ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕು.ಸಾಲವಾಡಗಿ ಇವರನ್ನು ನಾವದಗಿ ಗ್ರಾಮದ ಸಮಸ್ತ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

 ಇತ್ತೀಚಿಗೆ ತಾಲೂಕಿನ ನಾವದಗಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡ ಮಹರ್ಷಿ  ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರಾಜುಗೌಡ ಪಾಟೀಲರು ನನ್ನ ಗೆಲುವಿನಲ್ಲಿ ನಿಮ್ಮೆಲ್ಲರ ಪರಿಶ್ರಮ ಬಹಳವಿದೆ ನಿಮ್ಮೆಲ್ಲರ ಋಣ ನನ್ನ ಮೇಲೆ ಇದೆ ಅದನ್ನು ನಾನೆಂದೂ ಮರೆಯುವುದಿಲ್ಲ ನಾನು ಅಧಿಕಾರದಲ್ಲಿಇಲ್ಲದಿದ್ದಾಗೂ ಹಾಗೆ ಇದ್ದೆ ಈಗ ಶಾಸಕನಾದ ಮೇಲೆಯೂ ಹಾಗೆ ಇದ್ದೇನೆ ಅಧಿಕಾರ ಶಾಶ್ವತವಲ್ಲ ಜನರ ಪ್ರೀತಿ ವಿಶ್ವಾಸ ಮುಖ್ಯ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ನನಗೆ ಸ್ವಲ್ಪ ಸಮಯ ಅವಕಾಶ ಬೇಕು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ ಅನುದಾನದ ಕೊರತೆ ಇದೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು. 

ವೇದಿಕೆಯಲ್ಲಿ ದೇವರ ಹಿಪ್ಪರಗಿ ಜಡಿ ಮಠದ ಪರಮಪೂಜ್ಯಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು. ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ  ಶ್ರೀ ರಾಮಲಿಂಗಯ್ಯ ಶ್ರೀಗಳು .ನಾವದಗಿಯ ಪೂಜ್ಯಶ್ರೀ ರಾಜೇಂದ್ರ ಒಡೆಯರ್. ಕಲಕೇರಿಯ ಪೂಜ್ಯಶ್ರೀ ಸಿದ್ದರಾಮ ಶಿವಾಚಾರ್ಯರು. ಸಾಸನೂರ ಶಂಕರಲಿಂಗ ಶ್ರೀಗಳು. ತಾಳಿಕೋಟೆಯ ಮಹಾಂತ ಶ್ರೀಗಳು .ವೇದಮೂರ್ತಿ ಗುರಪಾದಯ್ಯ ಹಿರೇಮಠ. ವಾಲ್ಮೀಕಿ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ. ಭೀಮನಗೌಡ ಪಾಟೀಲ. ವಾಲ್ಮೀಕಿ ಸಮಾಜದ ಅಧ್ಯಕ್ಷ ರಂಗನಾಥ ಮೂಡಲಗೇರಿ. ಅಶೋಕ ಅಸ್ಕಿ .ಸಾಹೇಬಗೌಡ ಪಾಟೀಲ. ಲಕ್ಕುಂಡಿ.  ಎಂ. ಎಂ. ಪಾಟೀಲ. ರಾಜುಗೌಡ ಕೋಳೂರು. ರವಿ ದಣಿ ದೇಶಮುಖ. ಸಾಹೇಬಗೌಡ ಬಿರಾದರ. ನಿಂಗಣ್ಣ ಹವಾಲ್ದಾರ ಮತ್ತಿತರರು ಇದ್ದರು 

ಸುದ್ದಿ ಓದಿ