ಕ್ರಮ ಕೈಗೊಳ್ಳಲು ಅಧಿಕಾರಿಗಳಗೆ ಶಾಸಕ ಪೂಜಾರ ಸೂಚನೆ
ರಾಣೆಬೆನ್ನೂರು 09: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮರಾಟ ಹಾವಳಿ ಹೆಚ್ಚಾದ ಬಗ್ಗೆ ಗ್ರಾಮಸ್ಥರಿಂದ ಅನೇಕ ದೂರುಗಳು ಬಂದಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವೆ ಎಂದು ಶಾಸಕ ಅರುಣಕುಮಾರ ಎಂ. ಗುತ್ತೂರು ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಚಿಕ್ಕ ಯುವಕರು ಪೋಷಕರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಎಲ್ಲ ಕಡೆ ನಿರಂತರ ನಡೆಯುತ್ತದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಶಾಸಕರು ಎಚ್ಚರಿಸಿದರು.
ತಾಲ್ಲೂಕಿನ ತುಮ್ಮಿನಕಟ್ಟಿ, ಅಂಕಸಾಪುರ, ರಾವುತನಕಟ್ಟಿ, ಚಳಗೇರಿ, ಕರೂರು,ನಲವಾಗಲ,ಕುಮಾರಪಟ್ಟಣದಲ್ಲಿಕಾನೂನು ಬಾಹೀರವಾಗಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕೇಳಿ ಬರುತ್ತಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯಿತಿಯಿಂದ ಅಂಬೇಡ್ಕರ್ ಹಾಗೂ ಬಸವಜ್ಯೋತಿ ಯೋಜನೆಗಳ ಮನೆ ನೋಂದಣಿ ಕಾರ್ಯದಲ್ಲಿ ವಿಳಂಭವಾಗುತ್ತಿದೆ. ಈ ವರ್ಷ 977 ಮನೆಗಳನ್ನು ಹಂಚಿಕೆ ಮಾಡುವ ಗುರಿ ಇತ್ತು. ತಡವಾಗಿದ್ದಕ್ಕೆ ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇಒ ಮಲ್ಲಾಡದರವರು ಕೂಡಲೇ ಹಂಚಿಕೆ ಮಾಡಬೇಕು ಎಂದು ಮಲ್ಲಾಡದ ಅವರಿಗೆ ಸೂಚಿಸಿದರು.
ಸರ್ಕಾರದಿಂದ ಜಲಾನಯನ ಯೋಜನೆಯಡಿ ಜಮೀನುಗಳಲ್ಲಿ ಬದು ನಿರ್ಮಾಣ ಕಾರ್ಯ ಮಾಡುತ್ತಿದ್ದು, ರೈತರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ರೈತರು ಯಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದು ಈ ವರ್ಷ 12000 ಮೆಟ್ರಿಕ್ ಟನ್ ಗೊಬ್ಬರ ಬೇಕಾಗುತ್ತದೆ. ವಿದೇಶದಿಂದ ಹೆಚ್ಚಿನ ಗೊಬ್ಬರ ಹಾಗೂ ಕಚ್ಚಾ ಸಾಮಗ್ರಿಗಳು ಆಮದು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ರಸಗೊಬ್ಬರ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೃಷಿ ಸಚಿವರೊಂದಿಗೆ ಚರ್ಚಿಸಿ ಮೇ ತಿಂಗಳೊಳಗೆ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ದೊರಕಿಸಿಕೊಡುವಂತೆ ಮನವಿ ಮಾಡಲಾಗುವುದು ಎಂದರು.
ತಾಲ್ಲೂಕು ಮಟ್ಟದ ತ್ರೈಮಾಸಿಕ ಪರೀಶೀಲನಾ (ಕೆಡಿಪಿ) ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ನಾಮ ನಿರ್ದೇಶನಗೊಂಡ ತುಮ್ಮಿಕಟ್ಟಿಯ ಎಚ್.ಎಸ್.ನಂದೀಹಳ್ಳಿ, ಚಳಗೇರಿ ಕರೇಗೌಡ ನಾಗಪ್ಪ ಧುಳೆಹೊಳಿ, ನಲವಾಗಲ ಗ್ರಾಮದ ವಿಜಯ ಹನುಮಂತಪ್ಪ ಹಿತ್ತಲಮನಿ, ಮೇಡ್ಲೇರಿಯ ನಾಗರಾಜ ದುರುಗಪ್ಪ ಗೊಂಡಜ್ಜಿ, ಹಲಗೇರಿಯ ಆಸೀಪ್ ನವಾಬ್ ಖತೀಬ್, ಗಣೇಶನಗರದ ಸುಜಾತಾ ಆರಾಧ್ಯಮಠ ಅವರನ್ನು ಶಾಸಕರು ಸ್ವಾಗತಿಸಿ ಗೌರವಿಸಿದರು.
ನಂತರ ವಿವಿಧ ಇಲಾಖೆಗಳ ಪ್ರಗತಿಯನ್ನು ಪರೀಶೀಲನೆ ಮಾಡಿದರು. ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಪೌರಾಯುಕ್ತ ಉದಯಕುಮಾರ ಬಿ.ಟಿ, ಇಒ ಟಿ.ಕೆ. ಮಲ್ಲಾಡದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.