ಬೆಳಗಾವಿ

ದೇವಸ್ಥಾನದ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಶಾಸಕ ಪಾಟೀಲ

ದೇವಸ್ಥಾನದ  ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಶಾಸಕ ಪಾಟೀಲ

ನೇಸರಗಿ 30 :  ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮದ   ಬೀರದೇವರ ದೇವಸ್ಥಾನದ ಸುತ್ತಮುತ್ತಲಿನದ 10 ಲಕ್ಷ ರೂಪಾಯಿಗಳ ಅನುಧಾನದ  ಸಿ ಸಿ ರಸ್ತೆ  ನಿರ್ಮಾಣ ಮತ್ತು ತಗಡಿನ ಅಡುಗೆ ಕೊಣೆ   ಶೆಡ್ ನಿರ್ಮಾಣ ಕಾಮಗಾರಿಗೆ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.   ಈ ಸಂದರ್ಭದಲ್ಲಿ ಗ್ರಾಮದ ಅನೇಕ ಸಮಸ್ಯೆಗಳ ಕುರಿತು ಶಾಸಕರೊಂದಿಗೆ ಚರ್ಚಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಂಡರು.   

ಈ ಸಂದರ್ಭದಲ್ಲಿ  ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಯುವ ಮುಖಂಡ ಸಚಿನ ಪಾಟೀಲ,  ಶಿವಾನಂದ ಹಿರೇಮಠ, ಕಾಶೀಮ ಜಮಾದಾರ, ಮಲ್ಲಪ್ಪ ಕಡಕೋಳ, ನಿಂಗಪ್ಪ ಕಡಕೋಳ, ವಿಠ್ಠಲ ಹಂಜಿ, ಕುಬಣ್ಣ  ಕಡಕೋಳ, ಮಂಜುನಾಥ ಹುಲಮನಿ, ಮಲ್ಲಿಕಾರ್ಜುನ ನೇಸರಗಿ, ಮಹಾವೀರ ಹುಲಮನಿ, ಬಾಬು ಹೊಸಮನಿ, ಸಂತೋಷ ಉಳವಿ ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ