ಶಾಸಕ ನಾಡಗೌಡ ಜನ್ಮದಿನ: ಹಣ್ಣು-ಹಂಪಲ ವಿತರಣೆ
ತಾಳಿಕೋಟಿ 12: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಅವರ 67ನೇ ಜನ್ಮದಿನದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಹಾಗೂ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ಶುಕ್ರವಾರ ಶಾಸಕ ಅಪ್ಪಾಜಿ ನಾಡಗೌಡರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೆಳಿಗ್ಗೆ ಪಟ್ಟಣದ ಖಾಸ್ಗತೇಶ್ವರ ಮಠ ಹಾಗೂ ಹೇಮರೆಡ್ಡಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.ನಂತರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನೊಳಗೊಂಡು ವಿವಿಧ ಆಸ್ಪತ್ರೆಗಳಲ್ಲಿಯ ಒಳ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಿಸಿದರು.
ಹಿರಿಯ ಮುಖಂಡ ಬಿ.ಎಸ್.ಪಾಟೀಲ( ಯಾಳಗಿ) ಅವರು ಶಾಸಕ ಅಪ್ಪಾಜಿ ನಾಡಗೌಡ ಅವರು ಒಬ್ಬ ಸರಳ ಸಜ್ಜನ ರಾಜಕಾರಣಿ ಅವರ 67ನೇ ಜನ್ಮದಿನದ ಅಂಗವಾಗಿ ಪಟ್ಟಣದ ವಿವಿಧ ಆಸ್ಪತ್ರೆಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುತ್ತಿದ್ದೇವೆ.ಅವರು ನೂರು ವರ್ಷಗಳ ಕಾಲ ಸುಖವಾಗಿ ಬಾಳಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದರು.ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ.ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ (ನಾವದಗಿ).ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ ಹಜೇರಿ.ಮುಖಂಡರಾದ ಪ್ರಭುಗೌಡ ಮದರಕಲ್.ವಿ.ಸಿ.ಹಿರೇಮಠ. ಅಕ್ಕಮಹಾದೇವಿ ಕಟ್ಟಿಮನಿ. ಶರಣಭೂಪಾಲ ದೇಶಮುಖ.ಬಿ.ಎನ್.ಹಿಪ್ಪರಗಿ. ಸಂಗನಗೌಡ ಅಸ್ಕಿ.ಬಸನಗೌಡ ಬಿರಾದಾರ (ಜೈನಾಪುರ).ಬಸನಗೌಡ ನಾಡಗೌಡ ಶಳ್ಳಗಿ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ.ಸಿಕಂದರ ವಠಾರ. ಪರಶರಾಮ ತಂಗಡಗಿ.ಮುಸ್ತಫಾ ಚೌಧರಿ.ಕಾರ್ತಿಕ್ ಕಟ್ಟಿಮನಿ.ಹುಸೇನ ಜಮಾದಾರ.ಅಶ್ವಿನಿ ವಿ. ಪಾಟೀಲ.ರೇಣುಕಾ ಬಿರಾದಾರ. ಶಿವರಾಜ ಗುಂಡಕನಾಳ.ಪಂಚಾಕ್ಷರಿ ಹಿರೇಮಠ.ಅರ್ಜುಣಗಿ ಮುನ್ನಾ. ಮಹಿಬೂಬ ಕೆಂಭಾವಿ.ಮಹೇಶ ಚಲವಾದಿ.ಸಂಗಮೇಶ ದೇಸಾಯಿ.ಆಸಿಫ್ ಕೆಂಭಾವಿ.ಕಾಶಿನಾಥ ದೇಸಾಯಿ.ಗೋಪಾಲ ಕಟ್ಟಿಮನಿ.ಸಂಗನಗೌಡ ದೇಸಾಯಿ ಮತ್ತಿತರರು ಇದ್ದರು.