ಬರಮಲಿಂಗ ದೇವರ ಕರ್ತೃ ಗದ್ದುಗೆಯ ದರ್ಶನ ಪಡೆದ ಶಾಸಕ ಮಹೇಂದ್ರ ತಮ್ಮಣ್ಣವರ
ಪಾಲಬಾವಿ 06 : ಗ್ರಾಮದ ಆರಾಧ್ಯ ದೇವರಾದ ಬರಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷವಂತೆ ಈ ವರ್ಷವು ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು. ಮುಂಜಾನೆ 10 ಗಂಟೆಗೆ ಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಗ್ರಾಮಕ್ಕೆ ಭೇಟಿ ನೀಡಿ ಬರಮಲಿಂಗೇಶ್ವರ ದೇವರ ಕರ್ತೃಗದ್ದೆಗೆ ದರ್ಶನವನ್ನು ಪಡೆದುಕೊಂಡರು. ನಂತರ ಶಾಸಕ ಮಹೇಂದ್ರ ತಮ್ಮಣ್ಣವರಗೆ ಭರಮೇಶ್ವರ ದೇವರ ಜಾತ್ರಾ ಕಮಿಟಿ ಹಾಗೂ ಸಿದ್ಧಾರೂಢ ದೇವಸ್ಥಾನ ಅಭಿವೃದ್ಧಿ ಕಮಿಟಿಯವರು ಶಾಲು ಹೊದಿಸಿ, ಹೂಮಾಲೆ ಹಾಕಿ ಫಲಪುಷ್ಪ ನೀಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿಜಯಕುಮಾರ ಬಾಬಣ್ಣವರ, ರಾಮಪ್ಪ ಕಾಡಶೆಟ್ಟಿ, ಗಿರೇಪ್ಪ ಬಳಗಾರ, ಗುರು ಮರಡಿ, ಗುರುನಾಥ ಜಂಜರವಾಡ, ಮಹಾಲಿಂಗ ಜನವಾಡ, ಬರಮಪ್ಪ ಮಾನಶೆಟ್ಟಿ, ಸಂಗಪ್ಪ ತುಪ್ಪದ, ಹುಲೆಪ್ಪ ತೇಗೂರ, ಕಲ್ಲಪ್ಪ ಮರಡಿ, ರಮೇಶ ಉಳ್ಳಾಗಡ್ಡಿ, ಹೈದರ್ ಮುಜಾವರ, ರವಿ ಸಂಕನ್ನವರ, ಮುತ್ತಪ್ಪ ಶಿವಾಪುರ, ಬರಮಪ್ಪ ತೇಗೂರ ಇತರರು ಇದ್ದರು.