ಕುಷ್ಟಗಿ

ಬಿಜಕಲ್ ಗ್ರಾಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಭೇಟಿ

ಬಿಜಕಲ್ ಗ್ರಾಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಭೇಟಿ

ಕುಷ್ಟಗಿ 07; ತಾಲೂಕಿನ ಬಿಜಕಲ್ ಗ್ರಾಮದ ಮಲ್ಲಿಕಾಜರ್ುನ ಸಮುದಾಯ ಭವನದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ವಾಂತಿ ಭೇದಿಯಿಂದ ಬಳುಲಿ ಚಿಕಿತ್ಸೆ ಪಡೆಯುತ್ತಿದ್ದ  ಜನರ ಬಳಿ ಶಾಸಕ ದೊಡ್ಡನಗೌಡ ಪಾಟೀಲ್ ತೆರಳಿ ಮಾಹಿತಿ ಪಡೆದು ಯೋಗಕ್ಷೇಮ ವಿಚಾರಿಸಿದರು. 

ಗ್ರಾಮದಲ್ಲಿ ಮಲೀನತೆ, ನೈರ್ಮಲ್ಯ ವಾತವರಣ ಹಾಗೂ ಕುಡಿಯುವ ನೀರಿನ ಪೈಪ್ ಹೊಡೆದು ಕಲುಷಿತ ನೀರು ಸರಬರಾಜು ಉಂಟಾಗಿ ಈ ನೀರನ್ನು ಕೆಲವು ಜನರು ಸೇವನೆ ಮಾಡಿದ್ದರಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ನಡೆಯನ್ನು ಗ್ರಾಮಸ್ಥರು ಶಾಸಕರಿಗೆ ದೂರಿದರು.  ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಗ್ರಾಮದಲ್ಲಿನ ಚರಂಡಿಗಳನ್ನು ಸ್ವಚ್ಛತೆ ಮಾಡುವುದಿಲ್ಲ, ಕಸ ಕಡ್ಡಿಗಳನ್ನು ತೆಗೆಯುವದಿಲ್ಲ. 

ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಯಾದ ಸಮಯಕ್ಕೆ ತೆಗೆಯುವದಿಲ್ಲ ಇದರಿಂದ ಗ್ರಾಮದ ಜನರಿಗೆ ತುಂಬಾ ಸಮಸ್ಯೆ ಉಂಟಾಗಿದೆ ಎಂದು ಗ್ರಾಮ ಪಂಚಾಯಿತಿ ವಿರುದ್ಧ ಕಿಡಿಕಾರಿದರು. 

ಗ್ರಾಮದಲ್ಲಿ ಇನ್ಮುಂದೆ ಯಾವುದೇ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಬಿಜಕಲ್ ಪಿಡಿಓ ನಾಗರಾಜ ಅವರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದರು. 

ಗ್ರಾಮದಲ್ಲಿ ಇರುವ ಕೆಲವು ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಗ್ರಾಮಸ್ಥರು ಮಾಹಿತಿ ನೀಡಿದರು. 

ತಾಲೂಕು ಪಂಚಾಯಿತಿ ಇಓ ಶಿವಪ್ಪ ಸುಬೇದಾರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರ ಉಪಸ್ಥಿತರಿದ್ದರು 

ಸುದ್ದಿ ಓದಿ