ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಶಾಸಕ ಆನಂದ ನ್ಯಾಮಗೌಡ ಚಾಲನೆ
ಜಮಖಂಡಿ27: ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯಲು ಎಲ್ಲ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತವಾದ ನೂತನ ವಿದ್ಯಾರ್ಥಿ ನಿಲಯವನ್ನು ಕಟ್ಟಿದ್ದು ವಿದ್ಯಾರ್ಥಿಗಳು ಈ ಕಟ್ಟಡವನ್ನು ತಮ್ಮ ಮನೆಯಂತೆ ರಕ್ಷಿಸಿಕೊಳ್ಳಬೇಕೆಂದು ಶಾಸಕ ಆನಂದ ನ್ಯಾಮಗೌಡ ಕರೆ ನೀಡಿದರು.
ನಗರದ ಜಂಬಗಿ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟಣೆ ಮಾಡಿ, ನಂತರ ಮಾತನಾಡಿದರು.
4.38ಕೋಟಿ ವೆಚ್ಚದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತವಾದ ವಿದ್ಯಾರ್ಥಿ ನಿಲಯವನ್ನು ಕಟ್ಟಲಾಗಿದೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವಾರು ಸೌಲಭ್ಯವನ್ನು ನೀಡುತ್ತಿದೆ ಅವುಗಳನ್ನು ಉಪಯೋಗಿಸಿಕೊಂಡು ಮುಂದೆ ಬರಬೇಕು ಎಂದರು.
ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನ ಮರಳಿ ಬರುವದಿಲ್ಲ, ಪದವಿ ಮುಗಿಯುವದರಲ್ಲಿ ಹೆಚ್ಚು ಓದುವ ಮೂಲಕ ಮುಂದೆ ಬಂದು ಜೀವನವನ್ನು ರೂಪಿಸಿಕೊಳ್ಳಬೇಕು, ಪುಸ್ತಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಿದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಜ್ಞಾನದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಜೀರ ಕಂಗನೊಳ್ಳಿ ಮಾತನಾಡಿದರು, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ನಗರಸಭೆ ಸದಸ್ಯರಾದ ಪರಮಾನಂದ ಗೌವರೋಜಿ, ಕಿರಣ ಪಿಸಾಳ, ರಾಜು ಚಿಕನಾಳ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಶಶಿಧರ ಮೀಸಿ, ರವಿ ಬಬಲೇಶ್ವರ, ಸಂಗಮೇಶ ಅರಕೇರಿ, ಪಿ,ಬಿ,ಅಜ್ಜನವರ, ಜಗದೀಶ ಪಾಸೋಡಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಸಹಾಯಕ ನಿರ್ದೇಶಕ ಸಿ.ಎಸ್.ಗಡ್ಡದೇವರಮಠ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು,ಶ್ರೀಮತಿ ಕೆ,ಕೆ,ರಾಮದುರ್ಗ ನಿರೂಪಿಸಿದರು,ಆರ್,ಬಿ,ಮಠಪತಿ ವಂದಿಸಿದರು.
ಪೋಟೊ : ಜಮಖಂಡಿ ನಗರದ ಜಂಬಗಿ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದವನ್ನು ಶಾಸಕ ಆನಂದ ನ್ಯಾಮಗೌಡ ಉದ್ಘಾಟಣೆ ಮಾಡಿದರು.