ನೂತನ ಕೊಠಡಿ ಕಾಮಗಾರಿಗೆ ಶಾಸಕ ಅಮರೇಗೌಡ ಬಯ್ಯಾಪೂರ ಚಾಲನೆ
ಕುಷ್ಟಗಿ 27: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳು, ಬೋಧನೆಗೆ ಅವಶ್ಯಕ ಚಟುವಟಿಕೆ ನಡೆಸಲು ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುವದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಮುದೇನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ರೂ. 1 ಕೋಟಿ ವೆಚ್ಚದ ನೂತನ ಕೊಠಡಿ ನಿರ್ಮಾಣದ ಅಡಿಗಲ್ಲು ಮತ್ತು ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳು ಪೋಷಕರ ಹೆಸರು ತರುವಂತ ಕೆಲಸ ಮಾಡಬೇಕಿದೆ. ಉತ್ತಮ ಶಿಕ್ಷಣ ಪಡೆಯುವದು, ಓದಿ ಉನ್ನತ ಸ್ಥಾನ ಪಡೆಯಬೇಕು. ಶಾಲಾ ಅಭಿವೃದ್ಧಿಗೆ ಸ್ಥಳಿಯರು ,ಉಸ್ತುವಾರಿ ಸಮಿತಿ, ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಶ್ರಮಿಸುವಂತಾಗಬೇಕು, ಮುಂದಿನ ವರ್ಷದಲ್ಲಿ ಈ ಪ್ರೌಢಶಲೆಯ ಫಲಿತಾಂಶ ತರಬೇಕು . ನೂತನ ಕಾಮಗಾರಿಯಲ್ಲಿ 6 ಕೊಠಡಿಗಳು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ನಂತರ ಸ್ಥಳಿಯ ಪ್ರೌಢಶಾಲೆಯ ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದು 2 ನೇ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿ ಚಂದ್ರಶೇಖರ ನ್ನು ಸಮಾರಂಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮತ್ತು ತಾಲ್ಲೂಕು ಮಟ್ಟದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ ವಾಲಿಕಾರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಈರಮ್ಮ ವಾಲೇಕಾರ, ಎಸ್ಡಿಎಂಸಿ ಅಧ್ಯಕ್ಷರಾದ ಭೀಮನಗೌಡ ಬರಗೂರು, , ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಗುರುರಾಜ ಶ್ಯಾವಿ, ಗ್ರಾಪಂ ಸದಸ್ಯ ಹುಸೇನಪ್ಪ, ಶಶಿಧರ ಉಳಾಗಡ್ಡಿ , ಮುಖಂಡ ಚೇತನಕುಮಾರ, ವಿರುಪಣ್ಣ, ಮುದಕಪ್ಪ , ಶರಣಪ್ಪ ಗೊರಬಾಳ, ಆದಪ್ಪ ಉಳಾಗಡ್ಡಿ, ಶಶಿಧರ ನಾಯಕ, ಚಂದ್ರಶೇಖರ ಕುಂಬಾರ, ಮತ್ತು ಸ್ಥಳಿಯ ಮುಖಂಡರು ಶಾಲಾ ಉಸ್ತುವಾರಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಶಾಸಕರ ತರಾತುರಿ : ಸಮಾರಂಭ ನಡೆದ ಸಮಯದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸರ್ಕಾರದ ನಿಯಮಾವಳಿ ಮತ್ತು
ಶಿಷ್ಠಾಚಾರ ಮರೆತು ತರಾತುರಿಯಲ್ಲಿ ರೂ. ಕೋಟಿ ವೆಚ್ಚದ ಅಡಿಗಲ್ಲು ಮತ್ತು ಕಾಮಗಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮ ಆರಂಭವಾಗುತ್ತಿದಂತೆ ನಿಧಾನ ಮಾಡದೇ ತುರ್ತಾಗಿ ಮುಗಿಸಲು ಆಯೋಜಕರಿಗೆ ಸೂಚಿಸಿದರು