ರಾಣೆಬೆನ್ನೂರ

ಮಹಾತ್ಮ ಗಾಂಧೀಜಿಯವರ ಕಂಡ ಕನಸು ನನಸಾಗಿಸಲು ಶಾಸಕರ ಕರೆ

ಮಹಾತ್ಮ ಗಾಂಧೀಜಿಯವರ ಕಂಡ ಕನಸು ನನಸಾಗಿಸಲು ಶಾಸಕರ ಕರೆ

ರಾಣೆಬೆನ್ನೂರು 13:  ಭಾರತ ದೇಶ ಸುಂದರ ಮತ್ತು ಸ್ವಚ್ಛತೆ ಇದ್ದಾಗ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲು ಸಾಧ್ಯವಾಗುವುದು ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು. ಅವರು ಇತ್ತೀಚೆಗೆ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಸ್ವಚ್ಛತಾ ಶಿಬಿರ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು. ಯುವ ಸಮುದಾಯ  ಭಾರತದ ಭವಿಷ್ಯ ಇಲ್ಲಿ ಸ್ತ್ರೀ ಪುರುಷರೆಂಬ ಭಿನ್ನ ಭೇದ ಭಾವವಿಲ್ಲ ಎಲ್ಲರೂ ಸಮಾನವತೆಯಿಂದ ಕೆಲಸ ಮಾಡಿದಾಗ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು  ನನಸಾಗಲು ಸಾಧ್ಯವಾಗುವುದು ಎಂದರು. ರಾಜ್ಯ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ವೈ. ಎಂ. ಉಪ್ಪಿನ  ಅವರು ಮಾನಸಿಕ ನೆಮ್ಮದಿ ಮತ್ತು ತೃಪ್ತಿಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಯೋಜನೆಗೆ ತಮ್ಮ ಸೇವೆಯನ್ನು ನೀಡಬೇಕಾಗುತ್ತದೆ. ನಿಸ್ವಾರ್ಥ ಸೇವೆಯೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. 

ವಿಜಯಪುರ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಪ್ರೊ. ಬಿ ಎಸ್ ನವಿ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರೂಪಿಸಲು ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ. ಪ್ರೀತಿ,ವಿಶ್ವಾಸ, ಭಾವೈಕ್ಯತೆಯ ಮನೋಭಾವನೆ ಪರಸ್ಪರ ಸಹಾಯ ಸಹಕಾರ ಬೆಳೆಸಿಕೊಳ್ಳಲು ಶಿಬಿರಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ ಅಂತಹ ಪವಿತ್ರವಾದ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಮೂಲಕ ದೇಶದ ಭದ್ರತೆಯನ್ನು ರೂಪಿಸಿಕೊಳ್ಳಲು ಮುಂಭಾಗಬೇಕು ಎಂದರು. ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ ವ್ಹಿ. ಪಿ.ಲಿಂಗನಗೌಡ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಬಿ.ಎಸ್.ಪಟ್ಟಣಶೆಟ್ಟಿ, ಡಾ ಕವಿತಾ ಗಡ್ಡದಗೂಳಿ, ಪ್ರೊ ಕಾರ್ತಿಕ್ ಹೂಗಾರ್, ಪ್ರೊ ಮಂಜಪ್ಪ ಸಿ ಎಸ್, ಪ್ರೊ ವೀರಣ್ಣ ಸಿ.ಕೆ, ಮತ್ತಿತರೆ ಗಣ್ಯರು  ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿ  ಸೌಂದರ್ಯ ಬಗಾಡೆ ಪ್ರಾರ್ಥಿಸಿದರು. ಪ್ರಾಚಾರ್ಯ ನಾರಾಯಣ ನಾಯಕ ಎ ಸ್ವಾಗತಿಸಿದರು. ಪ್ರೊ ವೀರೇಶ್ ಕುರಹಟ್ಟಿ ವರದಿ ವಾಚಿಸಿದರು. ಪ್ರೊ . ಕೃಷ್ಣ ಎಲ್ ಹೆಚ್ ನಿರೂಪಿಸಿ,  ಅನುರಾಧ ಎಸ್ ವಂದಿಸಿದರು 

ಸುದ್ದಿ ಓದಿ