ಸಿಂಧಗಿ

ಎಮ್‌ಜೆಎಫ್ ಲಾಯಿನ್ ಕೆ. ಎಚ್‌. ಸೋಮಾಪೂರ ಜೋನ್ ಚೇರ್‌ಮನ್‌ರಾಗಿ ಆಯ್ಕೆ

ಎಮ್‌ಜೆಎಫ್ ಲಾಯಿನ್ ಕೆ. ಎಚ್‌. ಸೋಮಾಪೂರ ಜೋನ್ ಚೇರ್‌ಮನ್‌ರಾಗಿ ಆಯ್ಕೆ

ಸಿಂದಗಿ 13: ಪಟ್ಟಣದ ಆರ್‌. ಡಿ. ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಲಾಯಿನ್ ಕೆ. ಎಚ್‌. ಸೋಮಾಪೂರ ರವರು ಅಂತರಾಷ್ಟ್ರೀಯ ಲಾಯಿನ್ಸ್‌ ಕ್ಲಬ್ ಗೋವಾ ಮತ್ತು ಕರ್ನಾಟಕ 317ಬಿ ಯ ರೀಜನ್ 6 ರ ಜೋನ್ ಎರಡರ ವಿಭಾಗೀಯ ಚೇರ್‌ಮನ್‌ರಾಗಿ ಆಯ್ಕೆಯಾಗಿದ್ದಾರೆ. 

ಅಭಿನಂದನೆ; ಸಿಂದಗಿಯ ಲಾಯಿನ್ಸ್‌ ಕ್ಲಬ್ ನ ಅಧ್ಯಕ್ಷ ಲಾಯಿನ್ ಮಾಧು ಲೋಣಿ, ಖಜಾಂಚಿ ನಿವೃತ್ತ ಪ್ರಾಚಾರ್ಯ ಬಿ. ಪಿ. ಕರ್ಜಗಿ, ಕಾರ್ಯದರ್ಶಿ ಆಯ್‌. ಬಿ. ಬಿರಾದಾರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ. ಎಸ್‌. ಕಡಣಿ, ಪ.ಪೂ ಪ್ರಾಚಾರ್ಯ ಆರ್‌. ಬಿ. ಗೋಡಕರ, ಆರ್‌. ಡಿ. ಪಾಟೀಲ ಕಾಲೇಜಿನ ಪ್ರಾಚಾರ್ಯ ಲಾಯಿನ್ ಬಿ. ಎಸ್‌. ಸಿಂಗನಳ್ಳಿ, ಲಾಯಿನ್ ಡಾ. ಅಂಬರೀಷ್ ಬಿರಾದಾರ, ಪ್ರೊ. ಪಿ. ಎಮ್‌. ಮಡಿವಾಳರ, ಪ್ರೊ. ಎಸ್‌. ವಾಯ್‌. ಬೀಳಗಿ, ಎಂ. ಸಿ. ಹೊಸಮನಿ, ಜಿ. ಎಸ್‌. ಮಿರಗಿ ಹಾಗೂ ಕೆ. ಪಿ. ಬಿರಾದಾರ ಅಭಿನಂದಿಸಿದ್ದಾರೆ. 


ಸುದ್ದಿ ಓದಿ