ಚಿಕ್ಕೋಡಿ ಕೆಎಲ್ಇ ಇಂ. ಕಾಲೇಜಿನಲ್ಲಿ ಎಂಬಿಎ ಆರಂಭ
ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಚಿಕ್ಕೋಡಿ 05: ಇಲ್ಲಿನ ಕೆಎಲ್ಇ ಸಂಸ್ಥೆಯ ಇಂಜನೀಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಎಂಬಿಎ ಪದವಿ ಆರಂಭ ಮಾಡಲಾಗಿದೆ. ಗಡಿ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ತಿಳಿಸಿದರು.
ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೆಎಲ್ಇ ಸಂಸ್ಥೆ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ಗಡಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಾತ್ಮಕ ತಾಂತ್ರಿಕ ಶಿಕ್ಷಣ ನೀಡುವ ಕನಸನ್ನು ಹೊಂದಿದ್ದರು. ಅವರು ಕಂಡಿರುವ ಕನಸು ನನಸು ಮಾಡಲು ಚಿಕ್ಕೋಡಿ ಪಟ್ಟಣದಲ್ಲಿ ಕೆಎಲ್ಇ ಇಂಜೀನೀಯರಿಂಗ್ ಕಾಲೇಜನ್ನು 2008ರಲ್ಲಿ ಸ್ಥಾಪಿಸಲಾಯಿತು. ಇಂದು ಈ ಮಹಾವಿದ್ಯಾಲಯವು 13 ವಸಂತಗಳನ್ನು ಪೂರೈಸಿದೆ. ಮಹಾವಿದ್ಯಾಲಯದಲ್ಲಿ ಬಿಇ ಸಿವ್ಹಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೇಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ್ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಿದ್ದು, ಈ ಶೈಕ್ಷಣಿಕ ವರ್ಷದಿಂದ ಎಮ್ಬಿಎ ಕೋರ್ಸ ಆರಂಭಿಸಲಾಗಿದೆ ಎಂದರು.
ಅಟಲ್ ರಾ್ಯಂಕಿಂಗ್ ಫಾರ್ ಇನಸ್ಟಿಟ್ಯೂಶನಲ್ ಇನೊವೆಶನ್ ಅಸೆಸಮೆಂಟ್: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಟಲ್ ರಾ್ಯಂಕಿಂಗ್ ಫಾರ್ ಇನಸ್ಟಿಟ್ಯೂಶನಲ್ ಇನೊವೆಶನ್ ಅಸೆಸಮೆಂಟ್ ಸಂಸ್ಥೆ ದೇಶ್ಯಾದ್ಯಂತ ಗುಣಾತ್ಮಕ ಸಂಶೋಧನೆ ಹಾಗೂ ಹೊಸ ಪರಿಕಲ್ಪನೆಗಳ ಸಾಧನೆ ಕುರಿತು ರಾ್ಯಂಕಿಂಗ್ ನೀಡುತ್ತದೆ. ನಮ್ಮ ಮಹಾವಿದ್ಯಾಲಯವು 2021ರ ಅಟಲ್ ರಾ್ಯಂಕಿಂಗನಲ್ಲಿ ದೇಶ್ಯಾದ್ಯಂತ 59ನೇಯ ರಾ್ಯಂಕ್ ಪಡೆದುಕೊಂಡಿದೆ. 2012 ನೆ ಬ್ಯಾಚ್ನ ವಿದ್ಯಾರ್ಥಿಗಳ ಪಾಸಾಗಿ 10 ವರ್ಷವಾಗಿದೆ. ಈ ಹಳೆಯ ವಿದ್ಯಾರ್ಥಿಗಳು ದಶಕದ ಸಮಾವೇಶವನ್ನು ಮಾರ್ಚ 2022 ರಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಿದ್ದೆವೆ. ಕಾಲೇಜಿನ ಪ್ರಾಧ್ಯಾಪಕರಿಂದ ಆನಲೈನ್ ಮುಖಾಂತರ ವಿದ್ಯಾರ್ಥಿಗಳ ಕಲಿಕೆ ವ್ಯವಸ್ಥೆ ಮಾಡಲಾಗಿದೆ. ಕೌಶಲಗಳ ಅಪಡೆಟ್ಗಾಗಿ ವೆಬಿನಾರಗಳ ಆಯೋಜನೆ ಮಾಡಲಾಗಿದೆ ಎಂದರು.
ಗಡಿಭಾಗದಲ್ಲಿ ಶಿಸ್ತುಬದ್ಧ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವುದನ್ನು ಗಮನಿಸಿ ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇಯ ಸಂಸ್ಥಾಪನಾ ದಿನಾಚರಣೆಯಂದು ಚಿಕ್ಕೋಡಿಯ ಕೆಎಲ್ಇ ಇಂಜೀನೀಯರಿಂಗ್ ಕಾಲೇಜಿಗೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮಾದರಿ ಇಂಜೀನಿಯರಿಂಗ್ ಕಾಲೇಜು ಪ್ರಶಸ್ತಿ ಲಭಿಸಿದೆ. ಪರೀಕ್ಷಾ ಫಲಿತಾಂಶದಲ್ಲಿ ಮಹಾವಿದ್ಯಾಲಯವು ಈ ಭಾಗದಲ್ಲಿಯೇ ಮುಂಚೂಣಿಯಲ್ಲಿದ್ದು, ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಮುಂಚೂಣೆಯಲ್ಲಿದ್ದಾರೆ. ಸಿವಿಲ್ ವಿಭಾಗದ ವಿದ್ಯಾರ್ಥಿ ಸಂಜು ಭಾಸ್ಕರ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯದ ಎಸ್. ಎಮ್. ಪಂಚಗಟ್ಟಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಡಾ. ಅಮರ ಚೌಗುಲೆ, ಡಾ. ಅಮರ ಪಶುಪತಿಮಠ, ಪ್ರೊ. ಅಶ್ವಿನಿ ಗವಳಿ, ಪ್ರೊ. ಕುಮಾರ ಚೌಗುಲೆ, ಡಾ. ಆರ್. ಕೆ. ಪಾಟೀಲ, ಪ್ರೊ. ಪ್ರದೀಪ ಹೊದ್ಲೂರ, ಪ್ರೊ. ಬಸವರಾಜ ಚೌಕಿಮಠ, ಪ್ರೊ. ಮಹೇಶ ಲಟ್ಟೆ, ಪ್ರೊ. ಸುನೀಲ ಹೆಬ್ಬಾಳೆ, ಪ್ರೊ. ಸುನೀಲ ಶಿಂಧೆ, ಪ್ರೊ. ರಾಜು ಹೆಬ್ಬಾಳೆ, ಪ್ರೊ. ಸಚೀನ ಮೆಕ್ಕಳಕ್ಕಿ ಇದ್ದರು.