ಸೆನ್ಸೆಕ್ಸ್ 142 ಅಂಕ ಏರಿಕೆ
ಮುಂಬೈ, ಅ 28: ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಷೇರುಗಳಲ್ಲಿ ಹೊಸ ಖರೀದಿಯಿಂದ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಆರಂಭಿಕ ವಹಿವಾಟಿನಲ್ಲಿ 142 ಅಂಕ ಏರಿಕೆ ಕಂಡು 40,664.35ರಲ್ಲಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 33 ಅಂಕ ಏರಿಕೆ ಕಂಡು 11,922.60 ಕ್ಕೆ ತಲುಪಿದೆ. ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ 40,664.35 ಮತ್ತು 40,406.17 ರಲ್ಲಿತ್ತು. ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ 11,929.40 ಮತ್ತು 11,858.30ರಲ್ಲಿತ್ತು.ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 11 ಏರಿಕೆ ಕಂಡರೆ 19 ಕುಸಿದಿವೆ.ಏರಿಕೆ ಕಂಡ ಷೇರುಗಳ ಪೈಕಿ ಎಂ ಅಂಡ್ ಎಂ, ಮಾರುತಿ ಸುಜುಕಿ, ಎನ್ಟಿಪಿಸಿ, ಟಾಟಾ ಸ್ಟೀಲ್ ಮತ್ತು ಬಜಾಜ್ ಫಿನ್ಸರ್ವ್ ಸೇರಿವೆ. ನಷ್ಟ ಕಂಡ ಷೇರುಗಳಲ್ಲಿ ಕೊಟಕ್ ಬ್ಯಾಂಕ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಅಲ್ಟ್ರಾಸೆಮ್ಕೊ ಸೇರಿವೆ.