ಜ.22ಕ್ಕೆ ‘ಮೇಡಂ ಚೀಫ್ ಮಿನಿಸ್ಟರ್ ತೆರೆಗೆ
ಮುಂಬೈ, ಜ.4 :ಬಾಲಿವುಡ್ ನಟಿ ರಿಚಾ ಚಡ್ಡಾ ಮುಖ್ಯಭೂಮಿಕೆಯ ‘ಮೇಡಂ ಚೀಫ್ ಮಿನಿಸ್ಟರ್’ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ.ರಾಜಕೀಯ ಕಥಾವಸ್ತು ಹೊಂದಿರುವ ಈ ಚಿತ್ರ ಇದೇ 22ಕ್ಕೆ ತೆರೆ ಮೇಲೆ ಬರಲಿದೆ ಎಂದು ಚಿತ್ರ ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.‘ಜಾಲಿ ಎಲ್‌ಎಲ್ ಬಿ’ ಚಿತ್ರ ಖ್ಯಾತಿಯ ಸುಭಾಶ್ ಕಪೂರ್ ನಿರ್ದೇಶನ ಮಾಡಿದ್ದು, ಟೀ ಸಿರೀಸ್ ಹಾಗೂ ಕಂಗ್ರಾ ಟಾಕೀಸ್ ನಿರ್ಮಾಣದ ‘ಮೇಡಂ ಚೀಫ್ ಮಿನಿಸ್ಟರ್’ ಹೊರಬರಲಿದೆ.ಮಾನವ್ ಕೌಲ್ ಹಾಗೂ ಸೌರಭ್ ಶುಕ್ಲಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‘ಮೇಡಂ ಚೀಫ್ ಮಿನಿಸ್ಟರ್’ ಚಿತ್ರದ ಫಸ್ಟ್‌ಲುಕ್ ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ರಾಜಕೀಯ ರಂಗವನ್ನು ಅಲುಗಾಡಿಸುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಿಚಾ ಚಡ್ಡಾ, ಮಾನವ್ ಕೌಲ್ ಹಾಗೂ ಸೌರಭ ಶುಕ್ಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವೂ ಜ. 22ಕ್ಕೆ ಬಿಡುಗಡೆಯಾಗಲಿದೆ’ ಎಂದು ಟೀ ಸಿರೀಸ್ ಟ್ವೀಟ್ ಮಾಡುವ ಮೂಲಕ ವಿಷಯವನ್ನು ಬಹಿರಂಗಪಡಿಸಿದೆ.