ಡಿವೈಡರಗೆ ಡಿಕ್ಕಿ ಹೊಡೆದ ಲಾರಿ: ಚಾಲಕ ಗಾಯ
ಲೋಕದರ್ಶನ ವರದಿ
ರಾಣೀಬೆನ್ನೂರ 22: ಲಾರಿಯೊಂದು ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲಕ ಗಾಯಗೊಂಡ ಘಟನೆ ತಾಲೂಕಿನ ಛತ್ರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಜೆಸಿಬಿ ಹೊತ್ತು ಸಾಗುತ್ತಿದ್ದ ಲಾರಿ ಛತ್ರ ಗ್ರಾಮದ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಕ್ಕೆ ನಿಂತ ಮೆಲ್ಸೆತುವೆ ಕಾಮಗಾರಿಯ ಬಳಿಯಲ್ಲಿ ಸೂಚನಾ ಫಲಕಗಳಿಲ್ಲದ ಕಾರಣ ಡಿವೈಡರ್‌ಗೆ ಡಕ್ಕಿ ಹೊಡೆದಿದೆ. ಇದರಿಂದಾಗಿ ಮುಂದಿದ್ದ ಮಣ್ಣಿನ ದಿಬ್ಬಕ್ಕೆ ಬಡಿದು ವಾಹನ ನಿಂತಿದೆ ಇದರಿಂದ ಭಾರಿ ಅನಾಹುತ ತಪ್ಪಿದ್ದು ಅಪಘಾತದಲ್ಲಿ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಳೆದ ಹಲವು ವರ್ಷಗಳಿಂದ ಅಪೂರ್ಣವಾಗಿರುವ ಮೆಲ್ಸೆತುವೆ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದಾಗಿ ಛತ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇದೆ ಕಳೆದ ಕೆಲ ದಿನಗಳ ಹಿಂದೆಯಷ್ಟೆ ಬೈಕ್ ಡಿವೈಡರಗೆ ಡಿಕ್ಕಿಹೊಡೆದು ಯುವಕನೋರ್ವ ಸಾವಪ್ಪಿದ ಘಟನೆ ನಡೆದಿತ್ತು.