ಭಗವಾನ್ ಮಹಾವೀರ ಜಯಂತ್ಯೋತ್ಸವ
ಬಳ್ಳಾರಿ05: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಗವಾನ್ ಮಹಾವೀರ್ ಸ್ವಾಮಿಯ 2622ನೇ ಜಯಂತ್ಯೋತ್ಸವವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಬೆಂಗಳೂರು ರಸ್ತೆ, ತೇರು ಬೀದಿ ಬಳಿಯ ಜೈನ್ ದೇವಾಲಯದಲ್ಲಿ ಮಹಾವೀರ ಜಯಂತ್ಯೋತ್ಸವ ನಿಮಿತ್ತ ಬೆಳಿಗ್ಗೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಜನರು ಮಹಾವೀರ ಅವರ ದರ್ಶನ ಪಡೆದು ಭಕ್ತಿ ಸಮರ್ಿಸಿದರು. ಇದಕ್ಕೂ ಮುನ್ನ ಮಹಾವೀರ ಸ್ವಾಮೀ ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ದೇಗುಲದಿಂದ ಪ್ರಾರಂಭವಾದ ಮೆರವಣಿಗೆ ಬ್ರಾಹ್ಮಣ ಬೀದಿ, ಕಾಳಮ್ಮ ಸ್ಟ್ರೀಟ್, ಬೆಂಗಳೂರು ರಸ್ತೆ ಮೂಲಕ ದೇಗುಲಕ್ಕೆ ತಲುಪಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಮಹಾವೀರ್ ಸ್ವಾಮಿಯ ಜನ್ಮ ಕಲ್ಯಾಣ ಮಹೋತ್ಸವ ಹಿನ್ನೆಲೆ ದೇಗುಲದ ಸಭಾಂಗಣದಲ್ಲಿ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಇದಕ್ಕೂ ಮುನ್ನ ಆಯೋಜಿಸಿದ್ದ ಸಮಾರಂಭಕ್ಕೆ ವಿಮ್ಸ್ ನಿರ್ದೇಶಕ ಡಾ.ಗಂಗಾಧರ್ ಗೌಡ ಅವರು ಚಾಲನೆ ನೀಡಿ ಮಾತನಾಡಿದ ಅವರು, ಭಗವಾನ್ ಶ್ರೀ ಮಹಾವೀರ ಸ್ವಾಮೀಯ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೋಬ್ಬರೂ ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು, ಬಳ್ಳಾರಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದು, ದೇಗುಲಕ್ಕೆ ಬರಲು ಆಗಿರಲಿಲ್ಲ, ಇಂದು ದೇವರ ದರ್ಶನ ಪಡೆದಿರುವುದು ನನ್ನ ಸೌಭಾಗ್ಯ, ಮೊದಲ ಬಾರಿಗೆಜೈನ್ ಸಮುದಾಯದವರ ಸಮಾರಂಭದಲ್ಲಿ ಭಾಗವಹಿಸಿರುವೆ, ಇದು ಸಂತಸ ಮೂಡಿಸಿದೆ ಎಂದರು. ಈ ಸಂದರ್ಭದಲ್ಲಿ ಜೈನ್ ಸಮುದಾಯದ ಅಧ್ಯಕ್ಷ ಉತ್ಸವಲಾಲ್ ಬಾಗ್ರೆಚಾ, ಉಪಾಧ್ಯಕ್ಷ ಸೂರಜ್ ಮಲ್ ದಾಂತವಡಿಯಾ, ರೋಟಿ ಮಶಿನ್ ದೇಣಿಗೆ ಮಾಡಿದ ರಾಜೇಂದ್ರ ಕುಮಾರ್ (ಎಸ್.ಎಂ.ಜೈನ್), ಪ್ರವೀಣ್ ಚಂದ್ ಬಾಗ್ರೆಚಾ, ಸಾಕಲ್ ಚಂದ್ ಕವಾಡ್, ಎಸ್ ಜೆ ವೈಎಂ ಅದ್ಯಕ್ಷ ಬೇರುಲಾಲ್ ಸೇರಿದಂತೆ ಜೈನ್ ಸಮುದಾಯದ ನೂರಾರು ಮುಖಂಡರು ಇತರರು ಉಪಸ್ಥಿತರಿದ್ದರು.