ಚಿಕ್ಕೋಡಿ

ಮಾಸ್ಕ ಹಾಕದವರಿಗೆ ಅಪೂರ್ವ ಬಿದರಿ ಸಿಂಹಸ್ವಪ್ನ

ಮಾಸ್ಕ ಹಾಕದವರಿಗೆ ಅಪೂರ್ವ ಬಿದರಿ ಸಿಂಹಸ್ವಪ್ನ

ಚಿಕ್ಕೋಡಿ 28: ಕೊರೊನಾ ಮಹಾಮಾರಿಯ ಎರಡನೆ ಅಲೆ ವೇಗವಾಗಿ ಹರಡುತ್ತಿರುವ ಪರಿಣಾಮ ಸರ್ಕಾರ ಕರ​‍್್ಯೂ ಜಾರಿ ಮಾಡಿದೆ. ಆದರೆ ಚಿಕ್ಕೋಡಿ ನಗರದ ವಿವಿಧ ವ್ಯಾಪಾರಸ್ಥರು ರಾಜಾರೋಷವಾಗಿ ಹೆಚ್ಚು ಜನರನ್ನು ಸೇರಿಸಿ ವ್ಯಾಪಾರ ವಹಿವಾಟು ಮಾಡುವುದನ್ನು ಗಮನಿಸಿದ ಪ್ರೊಬೆಶನರಿ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬಿದರಿ ಅವರು ಸಿಂಹಸ್ವಪ್ನರಾಗಿ ವ್ಯಾಪಾರಸ್ಥರಿಗೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. 

ಕೊರೊನಾ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹದಿನೈದು ದಿನಗಳ ಕಾಲ ಕರ​‍್್ಯೂ ಜಾರಿ ಮಾಡಿದೆ. ಆದರೆ ಚಿಕ್ಕೋಡಿ ನಗರದ ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಜನರನ್ನು ಸೇರಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಚಿಕ್ಕೋಡಿ ನಗರದ ಬಟ್ಟೆ ಅಂಗಡಿಗಳಿಗೆ ದಾಳಿ ನಡೆಸಿದ ಅಪೂರ್ವಾ ಬಿದರಿ ಅವರು ಬಟ್ಟೆ ಅಂಗಡಿಯಿಂದ ಜನರನ್ನು ಹೊರಗೆ ಹಾಕಿ ಅಂಗಡಿ ಮಾಲಿಕರಿಗೆ ದಂಡ ಹಾಕಿ ಬಿಸಿಮುಟ್ಟಿದ್ದಾರೆ. 

ಇಡೀ ನಗರದಲ್ಲಿ ಸಂಚಾರ ಆರಂಭಿಸಿದ ಬಿದರಿ ಅವರು ಪೊಲೀಸ್‌ರ ಹಾಗೇ ಧಾಡಸಿತನದಿಂದ ಮಾಸ್ಕ ಹಾಕದೇ ಇರುವುವರಿಗೆ ಸಿಂಹಸ್ವಪ್ನರಾಗಿದ್ದಾರೆ. ಕಾಲಿಕೆ ಚಕ್ರ ಕಟ್ಟಿಕೊಂಡು ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿ ಮಾಸ್ಕ ಹಾಕದೇ ಇರುವವರನ್ನು ಗುರ್ತಿಸಿ ದಂಡ ಹಾಕುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೂ ಸಹ ಮಾಸ್ಕ ಹಾಕದೇ ಇರುವ ಪರಿಣಾಮ ದಂಡ ಜಡಿಯುತ್ತಿದ್ದಾರೆ. 2017ನೇಯ ಬ್ಯಾಚನಲ್ಲಿ ಕೆಎಎಸ್ ಪಾಸಾದ ಅವರು ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದು, ಇದೀಗ ಚಿಕ್ಕೋಡಿ ಪುರಸಭೆ  ಮುಖ್ಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪೂರ್ವಾ ಬಿದರಿ ವಾಹನ ಪುರಸಭೆ ಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರಿಗೆ ವ್ಯಾಪಾರಸ್ಥರು, ಸಾರ್ವಜನಿಕರು ದಿಕ್ಕಾಪಾಲಾ ಅಂಗಡಿ ಮುಂಗಟ್ಟು ಮುಚ್ಚಿಕೊಂಡು ಪರಾರಿಯಾಗುವ ದೃಶ್ಯ ಕಂಡು ಬರುತ್ತಿದೆ.  ಕೊರೊನಾ ನಿಯಂತ್ರಿಸುವಲ್ಲಿ ನಿರತರಾಗಿರುವ ಅಪೂರ್ವಾ ಬಿದರಿ ಅವರ ಕಾರ್ಯಕ್ಕೆ ನಗರದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 


ಸುದ್ದಿ ಓದಿ