ಸಮಾಜದಲ್ಲಿ ಸಾಮರಸ್ಯದಿಂದ ಬಾಳಿ: ಮಂಜುನಾಥ ಕಾಳಪ್ಪನವರ
ಲೋಕದರ್ಶನ ವರದಿ
ಉಗರಗೋಳ 18: ಉಮ್ರಾ ಯಾತ್ರೆಗೆ ಶುಕ್ರವಾರ ತೆರಳಿದ ಕಾಶೀಮಸಾಬ್ ಮಕ್ತುಮ್ಸಾಬ್ ಬಾರಿಗಿಡದ ಹಾಗೂ ಅವರ ಪತ್ನಿ ಹಸೀನಾಭಾನು ಬಾರಿಗಿಡದ ಅವರನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಪರವಾಗಿ ಸತ್ಕರಿಸಿ ಬೀಳ್ಕೊಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಎಲ್ಲ ಧರ್ಮಗಳು ಸಹೋದರತ್ವ ಭಾವ ಸಾರುತ್ತವೆ. ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳುವಂತೆ ಕರೆ ನೀಡುತ್ತವೆ. ಈಗ ಇಸ್ಲಾಂ ಧರ್ಮದ ಪವಿತ್ರ ಯಾತ್ರೆಯಾದ ಉಮ್ರಾಗೆ ನಮ್ಮೂರಿನ ಹಿರಿಯರು ತೆರಳುತ್ತಿರುವುದು ಸಂತಸದ ಸಂಗತಿ. ಪ್ರತಿಯೊಬ್ಬರೂ ಸಂಕುಚಿತ ಭಾವಗಳನ್ನು ತೊರೆದು, ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯದಿಂದ ಬಾಳುವಂತಾಗಲಿ ಎಂದು ಆಶಿಸಿದರು.
ರಾಷ್ಟ್ರಮಟ್ಟದ ಕುಸ್ತಿಪಟು ರಾಜೇಸಾಬ್ ಬೇವಿನಗಿಡದ, ದೇವೇಂದ್ರಪ್ಪ ಪಡಸುಣಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ ಗುಡೆನ್ನವರ, ಪರಸಪ್ಪ ಇಮ್ರಾಪುರ, ಅಪ್ಪು ಕಾಳಪ್ಪನವರ, ರಾಜೇಸಾಬ್ ಐ.ಬಾರಿಗಿಡದ, ಬಸವರಾಜ ಜಾಲಗಾರ, ಸಿದ್ದು ವಗ್ಗನ್ನವರ, ಯಲ್ಲಪ್ಪ ಕಾಳಪ್ಪನವರ, ಲಾಲಮೊಹಮ್ಮದ್ ಅರಬ್ಜಮಾದಾರ, ರಾಜನಗೌಡ ಪಾಟೀಲ, ಸಿರಾಜಸಾಬ್ ಹಂಚಿನಮನಿ, ಷರೀಫ್ ಬಾರಿಗಿಡದ, ಅಪ್ಪು ಬಾರಿಗಿಡದ, ರಾಜು ಬಡೆಪ್ಪನವರ, ಮಂಜು ಬಂಟನವರ ಇತರರಿದ್ದರು