ಜಾನುವಾರು ಸಂತೆ ಜಾನುವಾರು ಸಾಗಣೆ ಮಾಡುವುದು ನಿಷೇಧ: ಜಿಲ್ಲಾಧಿಕಾರಿ
ಲೋಕದರ್ಶನ ವರದಿ
ಸಿರುಗುಪ್ಪ 06: ಬಳ್ಳಾರಿ ಜಿಲ್ಲೆಯಾದ್ಯಂತ ಜಾನುವಾರುಗಳು ಸಂತೆ ಜಾನುವಾರುಗಳನ್ನು ಸಾಗಣೆ ಮಾಡುವುದನ್ನು ಅಕ್ಟೋಬರ್ ಒಂದರಿಂದ ನವೆಂಬರ್ ಒಂದರವರೆಗೆ ನಿಷೇಧಿಸಲಾಗಿದೆ ಜಿಲ್ಲಾ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಪ್ರಕಟಿಸಿದ್ದಾರೆ ಎಂದು ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದರು ಬಳ್ಳಾರಿ ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮದ ಗಂಟುರೋಗ ಕಾಣಿಸಿಕೊಂಡಿರುವುದರಿಂದ ಈ ರೋಗದ ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಅಬ್ದುಲ್ ನಬಿ ಹೇಳಿದರು.
ಎತ್ತುಗಳ ಸಾವು ವಿಜಯನಗರ ಜಿಲ್ಲೆ ಹೊಸಪೇಟೆ ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಿಂತ ಜಾಗದಲ್ಲಿ ಎತ್ತುಗಳು ಕುಸಿದು ಬಿದ್ದು ಅಸು ನೀಗಿದ ಘಟನೆ ಜರುಗಿದೆ ರೈತರಲ್ಲಿ ಆತಂಕ ಮೂಡಿದೆ ರೈತರಾದ ಎರೆಯಪ್ಪ ,ನಾಗಪ್ಪ,ತಿಪ್ಪಣ್ಣರವರಿಗೆ ಸೇರಿದ ಎತ್ತುಗಳು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿವೆ ಚರ್ಮದ ಗಂಟುರೋಗ ದಡಾರ ಕಾಯಿಲೆ ಗಳಿಂದ ಎತ್ತುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ 3ದಿನಗಳ ಅಂತರದಲ್ಲಿ 8ಕ್ಕೂ ಹೆಚ್ಚು ಎತ್ತುಗಳು ಮೃತಪಟ್ಟಿವೆ ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ