ಆಶೆ-ಆಮಿಷಗಳಿಗೆ ಒಳಗಾಗದೆ ಸರಳವಾಗಿ ಜೀವನ ಸಾಗಿಸಿ: ರೇಣುಕದೇವರು
ಮಾಂಜರಿ 5: ಜೀವನದಲ್ಲಿ ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೆ ಸರಳವಾಗಿ ಜೀವನ ಸಾಗಿಸಬೇಕೆಂದು ನಿಯೋಜಿತ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ-ಕಾಡಸಿದ್ದೇಶ್ವರ ಮಠದ ಉತ್ತರಾಧಿಕಾರಿ ಮತ್ತು ಧರ್ಮಾಕಾರಿ ರೇಣುಕ ದೇವರು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶಾಳಿ ಜಾತ್ರಾಮಹೋತ್ಸವ, ಮಹಾರಥೋತ್ಸವ ಹಾಗೂ ಬಿಲ್ವಾರ್ಚನೆ ಅಂಗವಾಗಿ ಹಮ್ಮಿಕೊಂಡು ಪೂರ್ವಭಾವಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಶೆ, ಸಿಟ್ಟು, ಅತಿಯಾದ ಪ್ರೀತಿ ನಿಮ್ಮ ನಿಜವಾದ ಶತ್ರುಗಳು. ಇವುಗಳು ನಿಮ್ಮನೂ ಸ್ವಾರ್ಥಿಗಳಾನ್ನಾಗಿ ಮಾಡಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದರು.
ದಿವ್ಯಸಾನಿಧ್ಯವನ್ನು ವಹಿಸಿದ್ದ ಮಾಂಜರಿಯ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ ಆಶೆಯ ಇಡೀ ಜಗತ್ತೆನ್ನೆ ಹಾಳು ಮಾಡಿದೆ.ಭಗವಂತನನ್ನು ಕಾಣುವ ಹಾಗೂ ಜನನ-ಮರಣ ದೂರ ಮಾಡುವ ಆಶೆ ಇರಬೇಕು. ವಿದ್ಯೆ ಗ್ರಹಿಸುವಂತಹ ಆಶೆ ಇರಬೇಕು.ಉನ್ನತ ಸ್ಥಾನಕ್ಕೆ ಹೋಗುವ ಆಶೆ ಇರಬೇಕು.ಹೊರತು ಯಾವುದೇ ಕಾರಣಕ್ಕೂ ದುರಾಸೆ ಇರಬಾರದು ಎಂದರು. ಶ್ರೀಶೈಲ್ ಜದ್ಗುರುಗಳು ಡಾ. ಚನ್ನಸಿದ್ದರಾಮ ಮಹಾಸ್ವಾಮೀಜಿಯವರನ್ನು ಮನೆಗೆ ಕರೆಸಿ ಪಾದಪೂಜೆಯನ್ನು ನೆರವರಿಸಿದ ಭಕ್ತರನ್ನು ಸನ್ಮಾನಿಸಲಾಯಿತು.
ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ, ಅಡವಯ್ಯ ಅರಳಿಕಟ್ಟಿಮಠ, ಮನೋಹರ ಫುಠಾಣಿ, ಎಸ್ ಎಂ ಮಠಪತಿ, ಮಹಾಲಿಂಗ ಭ್ರಿಂಗಿ, ಅಣ್ಣಯ್ಯ ಪೂಜಾರಿ, ಮಲ್ಲಪ್ಪ ಶಿಂಧೂರ ಉಪಸ್ಥಿತರಿದ್ದರು. ವೇದಮೂರ್ತಿ ಮಲ್ಲಯ್ಯಾ ಜಡೆ ನಿರೂಪಿಸಿದರು.