ವ್ಯಕ್ತಿಯ ಸತ್ವಯುತ ಬದುಕಿಗೆ ಸಾಹಿತ್ಯ ಮತ್ತು ಸಂಸ್ಕೃತಿದಾರೀದೀಪ
ರಾಣೇಬೆನ್ನೂರ 04: ಬಿ.ಎ.ಜೆ.ಎಸ್.ಎಸ್ ಬಿ.ಇಡಿಕಾಲೇಜಿನಲಿ ್ಲಸಾಹಿತ್ಯ ಸೌರಬ ಕಾರ್ಯಕ್ರಮದಡಿಯಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ ಹಾಗೂ ಸಾಹಿತ್ಯಿಕ ಕೃತಿಗಳ ಪರಿಚಯ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರ್ಪವರು ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಪೂರ್ತಿ ನೀಡುತ್ತದೆ, ಸತತಾಭ್ಯಾಸ, ನಿರಂತರ ಪರಿಶ್ರಮ, ಸಾಮಾಜಿಕ ಚಿಂತನೆ ಇದ್ದರೆ ಕಾವ್ಯ ರಚನೆಯಾಗುತ್ತದೆ. ರವಿ ಕಾಣದ್ದನ್ನುಕವಿಕಂಡ ಕವಿ ಕಾಣದ್ದನ್ನು ವಿಮರ್ಶಕ ಕಾಣುತ್ತಾನೆ ಎನ್ನುತ್ತಾ ವಿಮರ್ಶೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಶೈಕ್ಷಣಿಕ ಸಲಹೆಗಾರರು ಮಾತನಾಡಿ ಮಹಾನ್ ವ್ಯಕ್ತಿಗಳ ಜಯಂತಿಗಳ ಆಚರಣೆಯ ಮೂಲ ಉದ್ದೇಶವೇಜನತೆಯನ್ನು ಜಾಗೃತಿಗೊಳಿಸುವುದು.
ವ್ಯಕ್ತಿಯ ನಡೆ ನುಡಿ ಅನುಕರಣೀಯವಾಗಿರಬೇಕೆಂದು ಸಾಹಿತ್ಯ ಸಂಸ್ಕೃತಿಒಂದೇ ನಾಣ್ಯದಎರಡು ಮುಖಗಳಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಡಾ.ಆರ್.ಎಂ.ಕುಬೇರ್ಪನವರ“ಸ್ವರ ಮೇಳ” ಕೃತಿಯನ್ನು ಪರಿಚಯಿಸುತ್ತ ಡಾ.ಪ್ರೇಮಾನಂದ ಲಕ್ಕಣ್ಣನವರ ಎಲ್ಲಾಧರ್ಮ ಗ್ರಂಥಗಳ ಸಾಹಿತ್ಯಿಕ ನಿಲುವು ಒಂದೇ, ಅದೇ ಮಾನವನ ಅಭ್ಯುದಯ. ವಚನ ಸಾಹಿತ್ಯ ಸರ್ವ ಸಮಾನತೆಯ ಸಮಾಜದ ಗುರಿಯನ್ನು ಮುಖ್ಯವಾಗಿಟ್ಟುಕೊಂಡಿತ್ತು ಎಂದು ತಿಳಿಸಿದರು.
ಮತ್ತೋರ್ವಮುಖ್ಯ ಅತಿಥಿಗಳಾದ ಡಾ. ಹೊನ್ನಪ್ಪ ಹೊನ್ನಕ್ಕಳವರ ಪ್ರೊ.ಎಚ್. ಎ.ಭಿಕ್ಷಾವರ್ತಿಮಠರವರ ಕೃತಿ“ವಚನ ಸ್ಪಂದನ” ಪರಿಚಯಿಸುತ್ತಾ ಬಹುತ್ವರಾಷ್ಟ್ರದ ಭದ್ರ ಬುನಾದಿ ಮತ್ತು ಸಮಾನತೆಯನ್ನು ಸಾರುವಸಾಹಿತ್ಯ ವಚನ ಸಾಹಿತ್ಯವೆಂದರು. ಸಾಹಿತ್ಯ ಓದುವುದರಿಂದ ವೈವಿದ್ಯಮಯ ಬದುಕು ಪರಿಚಯವಾಗುತ್ತದೆ. ಕವಿ ಮತ್ತು ಸಹೃದಯ ಒಂದೇ ನಾಣ್ಯದಎರಡು ಮುಖಗಳೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಇಡಿಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಂ.ಮೃತ್ಯುಂಜಯ ಮಾತನಾಡಿ “ವ್ಯಕ್ತಿ ಶಕ್ತಿಯಾಗಲು ಸಾಹಿತ್ಯ ಕಮ್ಮಟಗಳು ಮುಖ್ಯವೆಂದರು, ವ್ಯಕ್ತಿ ಆನಂದಕ್ಕೆ ಸಾಹಿತ್ಯವೇ ಮೂಲ ಸೆಲೆ. ಕನ್ನಡಿಗರು ವಿಶ್ವಸಾಹಿತ್ಯಕ್ಕೆ ನೀಡಿದ ಕೊಡುಗೆಯೇ ವಚನ ಸಾಹಿತ್ಯವೆಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಕೆ.ಕೆ.ಹಾವಿನಾಳ ಬಿ.ಇಡಿಕಾಲೇಜಿನ ಉಪಪ್ರಾಚಾರ್ಯ ಪ್ರೊ. ಶಿವಕುಮಾರ ಬಿಸಲಳ್ಳಿ ಮತ್ತು ಸರ್ವ ಉಪನ್ಯಾಸಕರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗ್ಯದೇವಗಿರಿಮಠ ಪ್ರಾರ್ಥಿಸಿದರು, ಪ್ರೊ.ಎ.ಶಂಕರನಾಯ್ಕ ಸ್ವಾಗತಿಸಿದರು, ಡಾ. ಹೆಚ್.ಐ.ಬ್ಯಾಡಗಿ ನಿರೂಪಿಸಿದರು, ಪ್ರೊ.ಪರಶುರಾಮ ಪವಾರ ವಂದಿಸಿದರು.